ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?

Date:

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗ್ತಾ ಇದ್ದ ಬಿಗ್‍ಬಾಸ್ ಸಿಸನ್-4ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಈಗ ಫುಲ್ ಬ್ಯುಸಿಯಾಗಿ ಹೋಗಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರಬಂದ ಕೂಡಲೆ ಸನ್ಮಾನ ಕಾರ್ಯಕ್ರಮ, ಮೀಡಿಯಾ ಇಂಟರ್ ವ್ಯೂ , ಮಜಾ ಟಾಕೀಸ್, ಸೂಪರ್ ಮಿನಿಟ್ ಅಂತ ಪುಲ್ ಬ್ಯುಸಿಯಾಗಿದ್ದಾರೆ. ಇಷ್ಟೆಲ್ಲಾ ಬ್ಯುಸಿಯ ಮಧ್ಯೆಯೂ ದಿನಕ್ಕೊಮ್ಮೆ ಫೇಸ್‍ಬುಕ್ ಲೈವ್‍ನಲ್ಲಿ ತಮ್ಮ ನೆಚ್ಚಿನ ಅಭಿಮಾನಿಗಳೊಂದಿಗೆ ಸ್ವಲ್ಪ ಸಮಯ ಕಳೆಯುತ್ತಿದ್ದಾರೆ. ಆದ್ರೆ ಇವತ್ತು ಈ ಒಳ್ಳೆ ಹುಡುಗ ಯಾವ ಕಾರ್ಯಕ್ರಮಕ್ಕೂ ಒಪ್ಪಿಗೆ ಸೂಚಿಸದೆ ಒಂದು ಲಾಂಗ್ ಡ್ರೈವ್ ಹೊರಟಿದ್ದಾರಂತೆ..! ಯಾರ್ಜೊತೆ ಅಂತಾನಾ..? ಅದೇ ರೀ ಬಿಗ್‍ಬಾಸ್ ಸೀಸನ್-1ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶ ಮಾಡಿದ್ರಲ್ಲ, ಈ ಬಾರಿನೂ ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ರಲ್ಲ ರಿಷಿಕಾ ಅವ್ರ ಜೊತೆ ನೋಡಿ..! ಬಿಗ್‍ಬಾಸ್‍ನಲ್ಲಿ ಪ್ರಥಮ್ ಜೊತೆ ಲಾಂಗ್ ಡ್ರೈವ್ ಹೋಗೊದಾಗಿ ಹೇಳಿಕೊಂಡಿದ್ದ ರಿಷಿಕ ತಾನು ಕೊಟ್ಟ ಮಾತನ್ನು ಇಂದು ಪೂರೈಸಿದ್ದಾಳೆ.

ಆದ್ರೆ ವಿಷಯ ಅದಲ್ಲ ರಿಷಿಕಾ ಹಾಗೂ ಪ್ರಥಮ್ ಇಂದು ಬೆಳಿಗ್ಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸಣ್ಣ ಆಕ್ಸಿಡೆಂಟ್ ನಡೆದು ಹೋಗಿದೆ. ಕಾರ್ ರಿವರ್ಸ್ ತೆಗೆಯುವ ಭರದಲ್ಲಿ ಬೈಕ್‍ವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ ರಿಷಿಕ..! ಇದೇ ವೇಳೆ ಬೈಕ್ ಸವಾರನ ಬಳಿ ಸಾರಿ ಕೇಳೋನ ಅಂತ ಕೆಳಗಿಳಿದ ಪ್ರಥಮ್‍ಗೆ ಅಚ್ಚರಿಯ ಘಟನೆಯೊಂದು ನಡೆದು ಹೋಯ್ತಂತೆ ನೋಡಿ..! ಕಾರು ಡಿಕ್ಕಿ ಹೊಡೆದಿದ್ದರಿಂದ ಕೋಪಗೊಂಡಿದ್ದ ಬೈಕ್ ಸವಾರ ಪ್ರಥಮ್‍ರನ್ನು ನೊಡಿದ್ದೆ ತಡ ಸಾರ್ ನೀವಾ..! ಅಂತ ಖಷಿಯಾಗ್ಬಿಟ್ರಂತೆ..! ಅಷ್ಟೆ ಅಲ್ಲದೆ ನನ್ನ ಪತ್ನಿ ನಿಮ್ಮ ದೊಡ್ಡ ಫ್ಯಾನ್ ಸಾರ್.. 500ರೂ ಕರೆನ್ಸಿ ಹಾಕಿಸಿ ನಿಮಗೆ ಪ್ರತಿ ವಾರ ವೋಟ್ ಮಾಡ್ತಿದ್ರು. ಇವತ್ತು ನಿಮ್ಮನ್ನು ನೋಡಿ ಸಖತ್ ಖುಷಿಯಾಯ್ತು ಸಾರ್ ಅಂತ ಹೇಳಿ ಪ್ರಥಮ್ ಜೊತೆ ಒಂದು ಸೆಲ್ಫಿ ತೆಗೆಸಿಕೊಂಡ್ರಂತೆ. ಈ ವಿಷಯವನ್ನ ಸ್ವತಃ ಪ್ರಥಮ್ ತಮ್ಮ ಫೇಸ್‍ಬುಕ್ ನಲ್ಲಿ ಹೇಳಿಕೊಂಡಿದ್ದು, ಇಷ್ಟೊಂದು ಫ್ಯಾನ್ಸ್ ಹುಟ್ಕೊಂಡಿರೋಕೆ ಮೂಲ ಕಾರಣ ಕಲರ್ಸ್ ಕನ್ನಡ ವಾಹಿನಿ, ಅವರಿಗೊಂದು ಬಿಗ್ ಥ್ಯಾಂಕ್ಸ್ ಅಂತೇಳಿ ಮತ್ತೆ ರಿಷಿಕಾಳ ಜೊತೆ ಲಾಂಗ್ ಡ್ರೈವ್ ಹೊರಟ್ರಂತೆ ಪ್ರಥಮ್.

https://www.youtube.com/watch?v=ypCwjuWlbHE

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..

ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ

ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.

Share post:

Subscribe

spot_imgspot_img

Popular

More like this
Related

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...