ಮೈಸೂರಿನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ 2 ಗೋಪುರ ತೆರವು
ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಮಧ್ಯದಲ್ಲಿ ದೊಡ್ಡ ಗುಂಬಜ್, ಅಕ್ಕ-ಪಕ್ಕ ಚಿಕ್ಕ ಗುಂಬಜ್ ಇದ್ರೆ ಅದು ಮಸೀದಿನೇ.
ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ. ಅದರಂತೆಯೇ ನಾನು ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡಂತ ಮೈಸೂರು ಜಿಲ್ಲಾಧಿಕಾರಿ, ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜೀ ಅವರಿಗೆ ಧನ್ಯವಾದಗಳು ಎಂದು
ಗೋಪುರ ತೆರವು ಮಾಡಿರುವ ಫೋಟೋ ಹಾಕಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.