ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

Date:

 

ಪ್ರೇಮ್ ಗಣಪತಿ, ದೊಡ್ಡ ಹೊಟೇಲ್ ಉದ್ಯಮಿ. ಒಂದು ಕಾಲದಲ್ಲಿ ತಿಂಗಳಿಗೆ ಬರೀ 150 ರೂಪಾಯಿ ಸಂಬಳಕ್ಕೆ ಹೊಟೇಲ್, ಬೇಕರಿಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ರು. ಇಂದು ಸಾಗರದಾಚೆಗೂ ಹೆಸರಾದ ‘ದೋಸಾ ಪ್ಲಾಜ್ಹಾ’ ಮೂಲಕ 150 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದಾರೆ. ದೇಶ-ವಿದೇಶಗಳಲ್ಲೂ ದೋಸಾ ಪ್ಲಾಜ್ಹಾ ಕಮಾಲ್ ಮಾಡುತ್ತಿದ್ದಾರೆ. ಪ್ರೇಮ್ ಗಣಪತಿ ಅವರ ಮನೆಯಲ್ಲಿ ಈಗ್ಗೆ ಸರಿಸುಮಾರು 20 ವರ್ಷಗಳ ಹಿಂದೆ ಕಿತ್ತು ತಿನ್ನುವ ಬಡತನ. ತಾನು ಸಂಪಾದನೆ ಮಾಡಿ ತಂದು ಕೊಡದಿದ್ದರೆ ಮನೆ ನಡೆಯುದೇ ಇಲ್ಲ ಎನ್ನುವ ಪರಿಸ್ಥಿತಿ. ಇದನ್ನು ಅರಿತ ಪ್ರೇಮ್ ಅವರು ಹೆಚ್ಚಿಗೆ ಓದುವ ಹಂಬಲಿವಿದ್ದರೂ ವಿದ್ಯಾಭ್ಯಾಸವನ್ನು ಹದಿನೇಳನೇ ವಯಸ್ಸಿಗೆ ಮೊಟಕುಗೊಳಿಸಿ ಮುಂಬೈ ಎಂಬ ಮಹಾಸಾಗರಕ್ಕೆ ಬಂದು ತಲುಪಿದ್ರು.
ಮೂಲತಃ ತಮಿಳುನಾಡಿನ ಪ್ರೇಮ್ ಅವರಿಗೆ ಯಾವುದೇ ಕಸುಬು ಗೊತ್ತಿರಲಿಲ್ಲ. ಆದರೆ, ದುಡಿಯಬೇಕು ಎನ್ನುವ ಹಂಬಲ ಮಾತ್ರ ಹೆಚ್ಚಾಗಿತ್ತು. ಹಾಗಾಗಿ ಮುಂಬೈನಲ್ಲಿ ಬೇಕರಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡ್ರು. ಆ ಬೇಕರಿಯಲ್ಲಿ ಅವರು ಮಾಡುತ್ತಿದ್ದುದ್ದು ಪಾತ್ರೆ ತೊಳೆಯುವ ಕೆಲಸ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪ್ರೇಮ್ ಅರಿಗೆ ಅಲ್ಲೇ ಮೂರು ಹೊತ್ತು ಊಟ ಮತ್ತೆ ಮಲಗಲು ಜಾಗ ಕೊಟ್ಟಿದ್ರು.


ಆ ಬೇಕರಿಯಲ್ಲಿ ಪ್ರೇಮ್ ಅವರಿಗೆ ಸಂಬಳ ತಿಂಗಳಿಗೆ ನೂರೈವತ್ತು ರೂಪಾಯಿ. ಆ 150 ರೂಪಾಯಿಯಲ್ಲಿ ಮನೆಗೆ ಕಳುಹಿಸಿದರೆ ಯಾವುದೇ ಹಣ ಅವರಿಗೆ ಉಳಿಯುತ್ತಿರಲಿಲ್ಲ. ಹಾಗಾಗಿ ಏನಾದರೂ ಸಾಧನೆ ಮಾಡಲೇಬೇಕು ಎಂದು ತೀರ್ಮಾನಿಸಿದ ಪ್ರೇಮ್ ಗಣಪತಿ ಅವರಿಗೀಗ ಮೂವತ್ತೆಂಟು ವರ್ಷ. ಇಂದು ಹೊಟೇಲ್ ಉದ್ಯಮದಲ್ಲೇ ಸಾಕಷ್ಟು ಹಣ, ಹೆಸರು ಮಾಡುತ್ತಿದ್ದಾರೆ.
‘ದೋಸಾ ಪ್ಲಾಜ್ಹಾ’ ಎಂಬ ಕಂಪನಿ ಹುಟ್ಟು ಹಾಕಿದ್ದೂ ಒಂದು ಸಾಹಸಗಾಥೆಯೇ. ಎರಡ್ಮೂರು ವರ್ಷ ಬೇಕರಿ ಮತ್ತು ಹೊಟೇಲ್ಗಳಲ್ಲಿ ಪ್ರತಿನಿತ್ಯ ತಟ್ಟೆ ಲೋಟ ತೊಳೆದರು. ನಂತರ ತಾವೇ ಒಂದು ಸಣ್ಣ ಉದ್ಯಮ ಪ್ರಾರಂಭಿಸಬೇಕು ಎನ್ನುವ ಅಭಿಲಾಷೆಯಿಂದ ಗೆಳೆಯರಿಂದ ಸಾಲ ಪಡೆದುಮೊದಲು ತಳ್ಳುವ ಗಾಡಿಯಲ್ಲಿ ದೋಸೆ ಮತ್ತು ಇಡ್ಲಿ ಮಾರಾಟ ಮಾಡುವ ವ್ಯಾಪಾರ ಆರಂಭಿಸಿದರು.
ನೋಡಿ, ಹೀಗೆ ಶುರುವಾಯಿತು ಫುಟ್ಫಾತ್ನಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರಿಂದ ಮುಂಬೈ ಪೊಲೀಸರು ಗಾಡಿಯನ್ನು ಆಗಾಗ ವಶಪಡಿಸಿಕೊಳ್ಳುತ್ತಿದ್ರು. ಪ್ರತಿ ಸಲವೂ ಪೊಲೀಸರಿಗೆ ಸಲಾಂ ಹೊಡೆದು ಹಣ ನೀಡಿ ಗಾಡಿ ಬಿಡಿಸಿಕೊಂಡು ಬರುತ್ತಿದ್ರು. ಕಡೆಗೆ ಇನ್ನೊಂದಿಷ್ಟು ಸಾಲ ಮಾಡಿ ಪೊಲೀಸರ ಸಹವಾಸವೇ ಬೇಡ ಎಂದುಕೊಂಡು ಸಣ್ಣದೊಂದು ಕ್ಯಾಂಟೀನ್ ಶುರು ಮಾಡಿದ್ರು.
ಆಸಣ್ಣ ಕ್ಯಾಂಟೀನ್ನಲ್ಲೇ ರುಚಿ-ಶುಚಿಯುಳ್ಳ ದೋಸೆ, ಇಡ್ಲಿ ನೀಡುತ್ತಿದ್ರು. ಜನ್ರು ಕೂಡ ಇವರ ಕೈ ರುಚಿಗೆ ಮಾರು ಹೋಗಿದ್ರು. ಹೀಗಾಗಿ ವ್ಯಾಪಾರ, ವ್ಯವಹಾರ ದಿನೇ ದಿನೇ ಡಬಲ್ ಆಗುತ್ತಾ ಬಂತು. ಹೀಗೆ ಹಂತ ಹಂತವಾಗಿ ಮೇಲೆ ಬಂದ ಇವರು, ಮುಂದೆ ದೊಡ್ಡದಾದ ದೋಸಾ ಪ್ಲಾಜಾ ಪ್ರಾರಂಭಿಸಿದರು. ಮೊದಲು ಒಂದು ಪ್ಲಾಜಾ ಆರಂಭಿಸಿದಾಗ ಅಲ್ಲಿ ಆಗುತ್ತಿದ್ದ ವ್ಯಾಪಾರ ಮನಗಂಡ ಬಳಿಕ ಮುಂಬೈನ ಹಲವೆಡೆ ಔಟ್ಲೆಟ್ಗಳನ್ನು ತೆರೆದ್ರು.
ಅಲ್ಲೂ ಭರ್ಜರಿ ವ್ಯಾಪಾರದಿಂದ ಪ್ರೇಮ್ ಅವರು ಸಾಕಷ್ಟು ಹಣ ಗಳಿಸಲು ಆರಂಭಿಸಿದ್ರು. ಮುಂಬೈನಲ್ಲಿ ಆಗುತ್ತಿದ್ದ ವ್ಯಾಪಾರ ಕಂಡ ಅವರು, ತಮ್ಮ ವಹಿವಾಟನ್ನು ಪುಣೆ, ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆ ದೇಶದ ವಿವಿಧ 45 ನಗರಗಳಿಗೆ ವಿಸ್ತರಿಸಿದ್ರು. ಅಷ್ಟೇ ಅಲ್ಲದೆ ಒಮನ್, ಯುಎಇ ಮತ್ತು ನ್ಯೂಜಿಲೆಂಡ್ ದೇಶಗಳಲ್ಲೂ ದೋಸಾ ಪ್ಲಾಜಾ ಔಟ್ಲೆಟ್ಗಳನ್ನು ತೆರೆದು ಉತ್ತಮ ಲಾಭ ಗಳಿಸುತ್ತಿದ್ದಾರೆ.
ಒಟ್ಟಿನಲ್ಲಿ ದುಡಿದು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ‘ದೋಸಾ ಪ್ಲಾಜ್ಹಾ’ ದ ಈ ಪ್ರೇಮ್ ಗಣಪತಿಯೇ ಜ್ವಲಂತ ಉದಾಹರಣೆಯಾಗಿ ನಿಲ್ತಾರೆ ಅಲ್ವಾ?

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...