ಸಂಸದ ಪ್ರತಾಪ್ ಸಿಂಹ ಅವರು ಭಾರತೀಯ ಪ್ರೆಸ್‍ಕೌನ್ಸಿಲ್ (ಭಾರತೀಯ ಪತ್ರಿಕಾ ಮಂಡಳಿ)ಗೆ ನೇಮಕರಾಗಿದ್ದಾರೆ.
ಭಾರತೀಯ ಪ್ರತಿಕಾ ಕೌನ್ಸಿಲ್‍ನಲ್ಲಿ 5 ಮಂದಿ ಸಂಸತ್ ಸದಸ್ಯರು ಇರತಕ್ಕದ್ದು. ಮೂವರನ್ನು ಲೋಕಸಭೆಯ ಸ್ಪೀಕರ್ ನೇಮಿಸುತ್ತಾರೆ. ಇನ್ನಿಬ್ಬರನ್ನು ರಾಜ್ಯಸಭೆ ಅಧ್ಯಕ್ಷರು ನೇಮಕ ಮಾಡ್ತಾರೆ.
ಇದರಂತೆ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಬಿಜೆಪಿಯ ಸಂಸದರಾದ ಪ್ರತಾಪ್ ಸಿಂಹ ಹಾಗೂ ಮಿನಾಕ್ಷಿ ಲೇಖಿ ಅವರನ್ನು ಹಾಗೂ ಎಐಡಿಎಂಕೆಯ ಟಿ.ಸಿ ವೆಂಕಟೇಶ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.