ಹುಬ್ಬು ಕುಣಿಸಿ, ಕಣ್ಣು ಮಿಟುಕಿಸಿ ಹುಡುಗರ ಮನಗೆದ್ದ ಚೆಲುವೆ ಪ್ರಿಯ ಅವರ ವಿರುದ್ಧ ಮುಸ್ಲಿಂ ಯುವಕರ ತಂಡವೊಂದು ದೂರು ನೀಡಿರೋದು ನಿಮಗೆ ಗೊತ್ತೇ ಇದೆ.
ಮಲೆಯಾಳಂನ ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವೈ’ ಹಾಡಿನ ವೀಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಕಣ್ಣಲ್ಲೇ ಹುಡುಗರ ಗೆದ್ದ ಹುಡುಗಿ ಪ್ರಿಯ ಪ್ರಕಾಶ್ ವಾರಿಯರ್ ಎಂಬ ಯುವ ನಟಿ ಸ್ಟಾರ್ ಆಗಿ ಬಿಟ್ಟಿದ್ದಾರೆ.
ಈಗ ಈ ಕಣ್ಣಿನಾಟದ ಹುಡುಗಿ ವಿರುದ್ಧ ಹೈದರಾಬಾದ್ ನ ಯುವಕರ ತಂಡ ದೂರು ನೀಡಿದೆ. ಈ ಹಾಡಿನ ಚಿತ್ರೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಅಸಲಿಗೆ ಈ ಆಕ್ಷೇಪ ಹಾಡಿಗೂ ಅಲ್ಲ, ಸಾಹಿತ್ಯಕ್ಕೂ ಅಲ್ಲ..ಪ್ರಿಯ ಅವರ ಹಾವಭಾವಕ್ಕೂ ಅಲ್ಲ…! ಹಾಡಿನಲ್ಲಿ ಖತೀಜಾಬೀವಿ ಪವಿತ್ರ ಮೆಕ್ಕಾದಲ್ಲಿ ರಾಣಿಯಂತೆ ಬದುಕಿದ್ದರು ಎಂಬ ಸಾಲುಗಳು ಬರುತ್ತವೆ. ಈ ಹಾಡಿನಲ್ಲಿ ಪ್ರಿಯ ಅವರ ಹಾವಭಾವವನ್ನು ರೊಮ್ಯಾಂಟಿಕ್ ಆಗಿ ಚಿತ್ರಿಸಲಾಗಿದೆ ಎನ್ನೋದು ವಿರೋಧಕ್ಕೆ ಕಾರಣ.