ಪುನೀತ್ ರಾಜ್‍ಕುಮಾರ್ ಅವರಿಗೆ ಬಾಲ್ಯದಿಂದಲೂ ಸಿನಿಮಾ ಮೇಲೆ ಪ್ರೀತಿ. ನಟನೆಯ ಜೊತೆಗೆ ಎಷ್ಟೋ ಹಾಡುಗಳಿಗೆ ದನಿಯಾಗಿದ್ದಾರೆ ಪವರ್ ಸ್ಟಾರ್ ಅಪ್ಪು. ಇತ್ತೀಚೆಗಷ್ಟೇ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದ ದೊಡ್ಮನೆ ಹುಡುಗ ಇದೀಗ ಪಿಆರ್‍ಕೆ ಎಂಬ ಹೆಸರಲ್ಲಿ ಆಡಿಯೋ ಕಂಪನಿ ಪ್ರಾರಂಭಿಸಿದ್ದಾರೆ.
ಪುನೀತ್ ಅಭಿನಯದ ಅಂಜನಿಪುತ್ರ ಸಿನಿಮಾ ರಿಲೀಸ್‍ಗೆ ರೆಡಿಯಾಗಿದ್ದು, ನಾಡಿದ್ದು 24ನೇ ತಾರೀಕಿನಂದು ಧ್ವನಿಸಾಂದ್ರಿಕೆ ಬಿಡುಗಡೆ ಆಗಲಿದೆ. ಈ ಆಡಿಯೋ ರೈಟ್ಸ್ ಅನ್ನು ಅಪ್ಪು ಅವರ ಪಿಆರ್‍ಕೆ ಆಡಿಯೋ ಕಂಪನಿ ಪಡೆದಿದೆ. ಡಾ.ರಾಜ್‍ಕುಮಾರ್ ಹಾಡುವ ಭಾವಚಿತ್ರವಿರುವ ಆಡಿಯೋ ಕಂಪನಿಯ ಲೋಗೋ ತುಂಬಾ ಆಕರ್ಷಕವಾಗಿದೆ.