ಭಾರತಕ್ಕೆ ಅಂಡರ್ 19 ವಿಶ್ವಕಪ್ ತಂದುಕೊಟ್ಟ ನಾಯಕ ಪೃಥ್ವಿ ಶಾ ಇಂಗ್ಲೆಂಡ್ ವಿರುದ್ಧದ ಅಂತಿಮ 2ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
18ವರ್ಷದ ಯುವ ಬ್ಯಾಟ್ಸ್ ಮನ್ ಶಾ ಬಗ್ಗೆ ಸಚಿನ್ 10ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಇಂದು ಸತ್ಯವಾಗಿದೆ.
100MB ಆ್ಯಪ್ ಬಿಡುಗಡೆಯ ವೇಳೆ ಮಾತನಾಡಿದ ಸಚಿನ್ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ.
ತಾನು ಶಾ ಬಗ್ಗೆ ತನ್ನ ಸ್ನೇಹಿತನಿಗೆ ಹೇಳಿದ್ದೆ ಎಂದರು. ಶಾ 8ವರ್ಷದ ಬಾಲಕನಾಗಿದ್ದಾಗ ಆತನ ಬ್ಯಾಟಿಂಗ್ ಶೈಲಿ ಕಂಡು ಕೆಲವು ಸಲಹೆ ನೀಡಿದ್ದೆ. ಅಲ್ಲದೆ ಯಾವುದೇ ಕಾರಣಕ್ಕೂ ಈ ಶೈಲಿ ಬದಲಾವಣೆ ಮಾಡಿಕೊಳ್ಳದಂತೆ ಹೇಳಿದ್ದೆ ಎಂದು ಕ್ರಿಕೆಟ್ ದೇವರು ತಿಳಿಸಿದ್ದಾರೆ.
10 ವರ್ಷದ ಹಿಂದೆಯೇ ನಾನು ನನ್ನ ಸ್ನೇಹಿತನಿಗೆ ಶಾ ಬ್ಯಾಟಿಂಗ್ ಶೈಲಿಯನ್ನು ಗಮನಿಸುವಂತೆ ಹೇಳಿದ್ದೆ. ಮುಂದೊಂದು ದಿನ ಶಾ ಟೀಂ ಇಂಡಿಯಾದ ಪರ ಆಡಲಿದ್ದಾರೆ ಎಂದೂ ಸಹ ಹೇಳಿರುವುದಾಗಿ ಸಚಿನ್ ತೆಂಡೂಲ್ಕರ್ ತಿಳಿಸಿದಿದ್ದಾರೆ.