ಇಡೀ ಗೇಮಿಂಗ್ ಲೋಕ(Gaming World)ದಲ್ಲೇ ಪಬ್‌ಜಿ(PUBG) ಕ್ರಿಯೆಟ್ ಮಾಡಿರೋ ಕ್ರೇಜ್ ಯಾವ ಗೇಮ್ ಮಾಡಿಲ್ಲ. ಮಾಡೋದು ಇಲ್ಲ. ಯಾರನ್ನು ಕೇಳಿದರು ಪಬ್‌ಜಿ ಅಂತಾರೆ. ಅಷ್ಟರ ಮಟ್ಟಿಗೆ ಈ ಗೇಮ್ ಎಲ್ಲರನ್ನು ಆವರಿಸಿಕೊಂಡುಬಿಟ್ಟಿದೆ. ಕೆಲ ತಿಂಗಳು ಈ ಪಬ್‌ಜಿ ಗೇಮ್ ಇಂಡಿಯಾದಲ್ಲಿ ಬ್ಯಾನ್(Ban) ಮಾಡಲಾಗಿತ್ತು.
ಆದರೆ, ಬ್ಯಾನ್ ತೆಗೆದ ಮೇಲೆ ಮತ್ತೆ ಯುವಜನ(Youths)ತೆ ಈ ಪಬ್‌ಜಿ ಗೇಮ್ನಲ್ಲಿ ಮುಳುಗಿಹೋಗಿದೆ. ಈ ಹಿಂದೆಯೂ ಪಬ್‌ಜಿ ಗೇಮ್ನಿಂದ ಆದ ಅನಾಹುತ ಒಂದೆರೆಡಲ್ಲ. ಪಬ್‌ಜಿ ಆಟವಾಡಲು ಮೊಬೈಲ್(Mobile) ಕೊಡಲಿಲ್ಲ ಅಂತ ತಂದೆಯನ್ನೇ ಕೊಂದ(Murder) ಕಥೆಯನ್ನು ಕೇಳಿದ್ದೇವೆ. ಪಬ್‌ಜಿ ಆಡಿ ಹುಚ್ಚಾರಾಗಿ ಆಸ್ಪತ್ರೆ ಸೇರಿರುವುದನ್ನು ನೋಡಿದ್ದೇವೆ. ಈ ಪಬ್‌ಜಿ ಆಟದೊಳಗೆ ಮುಳುಗಿದರೆ, ಹೊರಗಿನ ಪ್ರಪಂಚದ ಅರಿವೆ ಇರುವುದಿಲ್ಲ. 100 ಜನರಲ್ಲಿ ಕೊನೆಯದಾಗಿ ಉಳಿದು ವಿನ್ನರ್.. ವಿನ್ನರ್..ಚಿಕನ್ ಡಿನ್ನರ್(Chicken Dinner).. ಮಾಡುವವರೆಗೂ ಗೇಮ್ನಿಂದ ಆಚೆ ಬರುವುದಿಲ್ಲ. ಇದೀಗ ಪಬ್‌ಜಿ ಗೇಮ್ನಿಂದ ಮತ್ತೊಂದು ದುರತವೊಂದು ನಡೆದುಹೋಗಿದೆ. ಹೀಗೆ ಪಬ್‌ಜಿ ಆಡುತ್ತಾ ವಾಕಿಂಗ್(Walking) ಮಾಡುತ್ತಿದ್ದ ವಿದ್ಯಾರ್ಥಿಗಳ(Students) ಮೇಲೆ ರೈಲು(Train) ಹರಿದ ಘಟನೆ ಉತ್ತರ ಪ್ರದೇಶ(Uttar Pradesh) ಮಥುರಾದಲ್ಲಿ ನಡೆದಿದೆ.
10ನೇ ತರಗತಿ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಹಾಗೂ 16 ವರ್ಷ ರಾಹುಲ್ ಇಬ್ಬರು ವಾಕಿಂಗ್ ಮಾಡುತ್ತಿದ್ದ ವೇಳೆ ಪಬ್‌ಜಿ ಆಟದಲ್ಲಿ ಮುಳುಗಿದ್ದಾರೆ. ವಾಕಿಂಗ್ ದಾರಿ ತಪ್ಪಿದೆ. ಗಮನ ಪಬ್‌ಜಿ ಮೇಲೆ ಹೆಚ್ಚಾಗಿತ್ತು. ಪರಿಣಾಮ ಇಬ್ಬರು ವಿದ್ಯಾರ್ಥಿಗಳ ಮೇಲೆ ರೈಲು ಹರಿದು ಸ್ಥಳದಲ್ಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ನಿನ್ನೆ ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆಯಿಂದಲೇ ಆಟ ಆಡಲು ಶುರು ಮಾಡಿಕೊಂಡಿದ್ದರೆ. ವಾಕಿಂಗ್ ವೇಳೆ ಪಬ್‌ಜಿ ಗೇಮ್ ಆಡುತ್ತಾ ಮುಂದೆ ಸಾಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ದಿನವಿಡಿ ಪಬ್‌ಜಿ ಆಡುತ್ತಿರಲಿಲ್ಲ. ಓದುವುದರಲ್ಲೂ ಮುಂದಿದ್ದರು. ಬಿಡುವು ಸಿಕ್ಕಾಗ ಮಾತ್ರ ಪಬ್‌ಜಿ ಆಡುತ್ತಿದ್ದರಂತೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.