ಪಬ್ ಜಿ ಈ ಒಂದು ಗೇಮ್ ಬಂದಾಗಿನಿಂದ ಯುವ ಜನತೆ ಈ ಆಟಕ್ಕೆ ತುಂಬಾ ಅಡಿಕ್ಟ್ ಆಗಿ ಬಿಟ್ಟಿದೆ. ಮನೆ , ಕ್ಲಾಸ್ ರೂಮ್ ಬಸ್ , ಮೆಟ್ರೋ ಹೀಗೆ ಇತ್ಯಾದಿ ಸ್ಥಳಗಳಲ್ಲಿ ಈ ಗೇಮ್ ಅನ್ನು ಯುವಕರು ಹಾಡುವುದನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಈ ಗೇಮ್ನಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳು ಹೇಳಿದ್ದರೂ ಸಹ ಯಾರೂ ಈ ಗೇಮನ್ನು ಮಾಡುವುದನ್ನು ನಿಲ್ಲಿಸುವ ಯತ್ನ ಮಾಡುತ್ತಿಲ್ಲ. ಆದರೆ ಇದೀಗ ಪಬ್ ಜಿ ಎಂದರೆ ಸಾಕು ಭಯ ಪಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಈ ಒಂದು ಘಟನೆ.
ಹೌದು ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದ ನಿವಾಸಿ ರಘುವೀರ್ ಕುಂಬಾರ(25) ಎಂಬಾತ ಪಬ್ ಜಿ ಗೆ ಅಡಿಕ್ಟ್ ಆಗಿಬಿಟ್ಟಿದ್ದ ಮಧ್ಯರಾತ್ರಿಯಾದರೂ ಸಹ ಮೊಬೈಲ್ ಹಿಡಿದುಕೊಂಡು ಆಟವಾಡುತ್ತಿದ್ದನ್ನು ನೋಡಿದ ಈತನ ತಂದೆ ಶಂಕ್ರಪ್ಪ ಕುಂಬಾರ (59) ಅವರನ್ನು ಕೊಂದು ಹಾಕಿದ್ದಾನೆ. ತಂದೆ ಬೈದ ನಂತರ ತಾಯಿಯನ್ನು ರೂಮ್ ಒಳಗಡೆ ಲಾಕ್ ಮಾಡಿ ತಂದೆಯನ್ನು ಬರ್ಬರವಾಗಿ ಕೊಚ್ಚಿ ತದನಂತರ ಕಾಲು ಮತ್ತು ತಲೆಯನ್ನು ಕಟ್ ಮಾಡಿದ್ದಾನೆ..! ಈ ಯುವಕನ ಕ್ರೌರ್ಯ ಎಷ್ಟಿದೆ ಎಂದರೆ ಆ ಆಟವನ್ನು ಆಡಿ ಆಡಿ ಅದೇ ರೀತಿಯ ಕ್ರೌರ್ಯವನ್ನು ತನ್ನ ತಂದೆಯ ಮೇಲೆಯೇ ಮೆರೆದಿದ್ದಾನೆ ಎನ್ನಿಸುತ್ತದೆ..