ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ಬಳಿಕ ಕಂಬಳ ಆಚರಣೆಗಿದ್ದ ಅಡೆತಡೆಗಳು ನಿವಾರಣೆಯಾಗಿದೆ.
ಕರವಾಳಿಯಲ್ಲೀಗ ಕಂಬಳದ ರಂಗು ಹೆಚ್ಚಿದೆ. ಈ ಬಾರಿ ಪುತ್ತೂರಿನ ಕೋಟಿ ಚನ್ನಯ್ಯ ಕಂಬಳಕ್ಕೆ ರಜತೋತ್ಸವದ ಸಂಭ್ರಮ.
ಇಂದು ಮತ್ತು ನಾಳೆ ಪುತ್ತೂರಿನಲ್ಲಿ ಕಂಬಳದ್ದೇ ಸದ್ದು, ಸಂಭ್ರಮ.
ಮುತ್ತಪ್ಪ ರೈ ಸಾರಥ್ಯದ ಪುತ್ತೂರು ಕಂಬಳ ಅದ್ಧೂರಿಯಾಗಿ ನಡೆಯಲಿದ್ದು, ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸಲಿದೆ.
ಇನ್ನೇನು ಜನಪದ ಕ್ರೀಡೆ ಕಂಬಳ ಅಳಿವಿನಂಚಿಗೆ ಹೋಗಲಿದೆ ಎಂದು ಯೋಚಿಸಲಾಗುತ್ತಿತ್ತು. ಇಷ್ಟರಲ್ಲೇ ಕಂಬಳಕ್ಕೆ ಸುಪ್ರೀಂ ಅಸ್ತು ಎಂದಿದ್ದು ಹೊಸ ರಂಗು ಮೂಡಿದೆ.
ಉದ್ಯಮಿ, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಮುಂದಾಳತ್ವದಲ್ಲಿ ಮಡೆಯಲಿರೋ ಪುತ್ತೂರು ಕಂಬಳಕ್ಕೆ 25 ರ ಸಂಭ್ರಮ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣ ದೇವರ ಮಾರು ಗದ್ದೆಯಲ್ಲಿ ಕಂಬಳ ನಡೆಯಲಿದೆ.
ಕಳೆದ ಎರಡು ವರ್ಷ ಕಂಬಳ ಬ್ಯಾನ್ ಆಗಿದ್ದರಿಂದ ಈ ವರ್ಷದ ಕಂಬಳ ವಿಶೇಷವಾಗಿದೆ. ಸುಮಾರು 150 ಜೋಡಿ ಕಂಬಳದ ಕೋಣಗಳು ಭಾಗವಹಿಸುತ್ತಿವೆ.
ಆಗಮಿಸಿದ ಎಲ್ಲಾ ಜೋಡಿಗಳಿಗೂ ರಜತ ಪದಕ ನೀಡಿ ಗೌರಿವಿಸಲಾಗುವುದು. ವಿಜೇತ ಕೋಣಗಳಿಗೆ ಮತ್ತು ಓಟಗಾರರಿಗೆ ಬಂಗಾರದ ಪದಕ ನೀಡಲಾಗುವುದು.