ನೋಟ್ ಬ್ಯಾನ್ ನಂತ್ರ ಹಣಕ್ಕಾಗಿ ಜನ ಬ್ಯಾಂಕ್ ಮತ್ತು ಎಟಿಎಂ ಮುಂದೆ ಸಾಲು ಸಾಲುಗಟ್ಟಲೆ ಕ್ಯೂ ನಿಂತ್ರೂ ಕೂಡ ಹಣ ಸಿಗೋದು ಕಷ್ಟ. ಆದ್ರೆ ಇಲ್ಲಿ ನಡೆದ ಘಟನೆ ಕೇಳುದ್ರೆ ಒಂದು ಕ್ಷಣ ನೀವು ದಂಗಾಗಿ ಹೋಗ್ತೀರ..! ಯಾಕಂದ್ರೆ ತನ್ನ ಅಕೌಂಟ್‍ನಿಂದ ಹಣ ವಿತ್ ಡ್ರಾ ಆಗ್ಲಿಲ್ಲ ಅಂತ ಮನನೊಂದ ವಿದ್ಯಾರ್ಥಿಯೋರ್ವಳು ಆತ್ನ ಹತ್ಯೆಗೆ ಯತ್ನಿಸಿದ್ದಾಳೆ ನೋಡಿ..! ಉತ್ತರ ಪ್ರದೇಶದ ಎಟಾವಾ ಜಿಲ್ಲೆಯ ಗಿರಿಜಾ (23) ಬಿ.ಎ ವ್ಯಾಸಾಂಗ ಮಾಡ್ತಾ ಇದ್ದು, ಅನಾರೋಗ್ಯದಿಂದ ಬಳಲ್ತಾ ಇದ್ಲು ಎಂದು ತಿಳಿದು ಬಂದಿದೆ. ಹೀಗಾಗಿ ಔಷಧಿ ಕೊಂಡುಕೊಳ್ಳಲು ಕಳೆದ 15 ದಿನಗಳಿಂದ ತನ್ನ ಖಾತೆಯಲ್ಲಿದ್ದ ಹಣವನ್ನ ವಿತ್ ಡ್ರಾ ಮಾಡ್ಕೊಳೋಕೆ ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಹಣ ಸಿಕ್ಕಲಿಲ್ಲ. ಸರದಿ ಸಾಲಿನಲ್ಲಿ ಪ್ರತಿ ದಿನವೂ ಕಷ್ಟ ಪಟ್ಟು ನಿಂತು ತನ್ನ ಸರದಿ ಬಂದರೆ ಬ್ಯಾಂಕ್ ಸಿಬ್ಬಂದಿಗಳು ಕೆವೈಸಿ ದಾಖಲೆ ಅಪೂರ್ಣ ಎಂದು ಹೇಳಿ ಹಣ ನೀಡೋಕೆ ನಿರಾಕರುಸ್ತಾ ಇದ್ರು. ಇದರಿಂದ ರೋಸಿ ಹೋಗಿದ್ದ ಗಿರಿಜಾ ತನ್ನ ಬ್ಯಾಗ್‍ನಲ್ಲಿದ್ದ ಚಾಕು ತೆಗೆದು ತನಗೆ ತಾನೇ ಚುಚ್ಚಿಕೊಂಡಿದ್ದಾಳೆ..! ಸಮಯಕ್ಕೆ ಸರಿಯಾಗಿ ಗಿರಿಜಾಳನ್ನು ಆಸ್ಪತ್ರೆಗೆ ಕೊಂಡೊಯ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸಾಮಾನ್ಯವಾಗಿ ಕೆವೈಸಿ ಫಾರ್ಮ್ ಬ್ಯಾಂಕ್‍ನಲ್ಲೆ ಲಭ್ಯವಿರುತ್ತೆ. ಆದರೆ ಜನರಿಗ ಹಣದ ಅಗತ್ಯತೆ ಹೆಚ್ಚಿರೋ ಕಾರಣದಿಂದ ಎಷ್ಟೆ ಫಾರ್ಮ್ ತಂದರೂ ಕೂಡಲೇ ಖಾಲಿಯಾಗಿ ಬಿಡುತ್ತೆ. ಇದರಿಂದ ಕೆವೈಸಿ ಫಾರ್ಮ್ ಕೊರತೆ ಕಂಡು ಬರುತ್ತಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?
ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?
ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!
ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?