ಈ ಸರ್ಕಾರ ಬಹಳ ದಿನ ಇರಲ್ಲ. ಸರ್ವನಾಶ ಆಗಿಹೋಗುತ್ತದೆ: ಆರ್.ಆಶೋಕ್ ಕಿಡಿ
ಬೆಂಗಳೂರು: ಈ ಸರ್ಕಾರ ಬಹಳ ದಿನ ಇರಲ್ಲ. ಸರ್ವನಾಶ ಆಗಿಹೋಗುತ್ತದೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬಹಳ ದಿನ ಇರಲ್ಲ. ಸರ್ವನಾಶ ಆಗಿಹೋಗುತ್ತದೆ. ಇದು ಮುಸ್ಲಿಮರ ಓಲೈಕೆ ಮಾಡುವ ಸರ್ಕಾರ. ಈಗಾಗಲೇ ಈ ಸರ್ಕಾರಕ್ಕೆ ರಾಜ್ಯದ ಜನರ, ಬೆಂಗಳೂರು ಜನರ ಶಾಪ ತಟ್ಟಿದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್‌ನವರು ಅವರ ಹೈಕಮಾಂಡ್ ಮಾತು ಕೇಳುತ್ತಿದ್ದಾರೆ. ನೀವು ನಿಮ್ಮ ಹೈಕಮಾಂಡ್ ಮಾತು ಕೇಳಿದರೆ, ಜನ ನಿಮ್ಮನ್ನು ದೂರ ಇಡುತ್ತಾರೆ. ಕಾಂಗ್ರೆಸ್‌ನಲ್ಲೇ ಈ ವರದಿಯಿಂದ ದೊಡ್ಡ ದಂಗೆ ಆಗಬಹುದು. ಹನಿಟ್ರ‍್ಯಾಪ್, 500 ಕೋಟಿ ರೂ. ಕಿಕ್‌ಬ್ಯಾಕ್, ಗುತ್ತಿಗೆದಾರರ ಆರೋಪ ವಿಚಾರ ಡೈವರ್ಟ್ ಮಾಡಲು, ಅವರ ಎಲ್ಲ ಹುಳುಕು ಸೈಡ್‌ಲೈನ್ ಮಾಡುವ ಉದ್ದೇಶದಿಂದ ಈಗ ವರದಿ ಮುನ್ನೆಲೆಗೆ ತಂದಿದ್ದಾರೆ ಎಂದು ಹೇಳಿದರು.