ನವದೆಹಲಿ : ಇತ್ತೀಚೆಗೆ ಜನ ದೇವ್ರನ್ನು ನಂಬುವುದಕ್ಕಿಂತ ಹೆಚ್ಚಾಗಿ ಸ್ವಯಂಘೋಷಿತ ದೇವಮಾನವರನ್ನು ನಂಬುವುದು ಹೆಚ್ಚಾಗ್ತಾ ಇದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಇಂತಹ ಸ್ವಯಂಘೋಷಿತ ದೇವಮಾನವರಿಗೆ ಮಣೆ ಹಾಕುವುದು ನಿಜಕ್ಕೂ ವಿಪರ್ಯಾಸ.
ದೆಹಲಿ ಪೊಲೀಸ್ ಠಾಣೆಯೊಂದರಲ್ಲಿ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ ಗೆ ರಾಜಾತಿಥ್ಯ ನೀಡಿರುವುದು ಬೆಳಕಿಗೆ ಬಂದಿದ್ದು, ಫೋಟೋಗಳು ವೈರಲ್ ಆಗಿವೆ.
ವರದಕ್ಷಿಣೆ ಕಿರುಕುಳ ಸೇರಿದಂತೆ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿರುವ ರಾಧೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ತನ್ನ ಭದ್ರತೆ ಕುರಿತು ರಾಧೆ ಮಾ ಪೊಲೀಸ್ ಠಾಣೆಗೆ ಹೋಗಿದ್ದಾಗ ಅಲ್ಲಿನ ಪೊಲೀಸ್ ಅಧಿಕಾರಿ ತಮ್ಮ ಚೇರ್ ಅನ್ನು ರಾಧೆ ಮಾಗೆ ಬಿಟ್ಟುಕೊಟ್ಟಿದ್ದಾರೆ..!
ಪೊಲೀಸ್ ಅಧಿಕಾರಿಯ ಚೇರ್‍ನಲ್ಲಿ ರಾಧೆ ಮಾ ಕುಳಿತಿದ್ದು, ಪಕ್ಕದಲ್ಲಿ ಅಧಿಕಾರಿ ಕೆಂಪು ಶಾಲು ಹೊದ್ಕೊಂಡು ಕೈಕಟ್ಟಿ ನಿಂತಿರುವ ಫೋಟೋ ಈಗ ವೈರಲ್ ಆಗಿದೆ. ಅಷ್ಟೇ ಅಲ್ಲ ಠಾಣೆಯಲ್ಲಿ ರಾಧೆ ಮುಂದಾಳತ್ವದಲ್ಲಿ ಭಜನೆ ಕಾರ್ಯಕ್ರಮ ಕೂಡ ನಡೆದಿದೆಯಂತೆ..! ಈ ಬಗ್ಗೆ ತನಿಖೆ ಆದೇಶಿಸಿಲಾಗಿದೆ.