ಬಿಕಿನಿ ಫೋಟೋದ ಬಗ್ಗೆ ಟ್ರೋಲ್ ಮಾಡಿದವರಿಗೆ ನಟಿ ರಾಧಿಕಾ ಆಪ್ಟೆ ಖಡಕ್ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ರಾಧಿಕಾ ಬಿಕಿನಿ ಧರಿಸಿ ತಮ್ಮ ಗೆಳೆಯನ ಜೊತೆ ಗೋವಾ ಬೀಚ್ ನಲ್ಲಿ ಕುಳಿತುಕೊಂಡಿರೋ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆಗಳೂ ಆಗಿದ್ದವು. ಟ್ರೋಲ್ ಪೇಜ್ ಗಳಿಗೂ ಇದು ಆಹಾರವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಧಿಕಾ ಟ್ರೋಲ್ ಆಗಿರೋ ವಿಚಾರ ನಂಗೆ ಗೊತ್ತಿಲ್ಲ. ನನ್ನ ಸ್ನೇಹಿತರು ಹೇಳಿದ ಬಳಿಕ ನನ್ನ ಗಮನಕ್ಕೆ ಬಂದಿದೆ. ಇದು ಹಾಸ್ಯಾಸ್ಪದ ಸಂಗತಿ. ಬೀಚ್ ನಲ್ಲಿ ನಾನು ಸೀರೆ ಉಟ್ಕೊಂಡು ನಡೆದಾಡಬೇಕು ಅಂತ ಜನ ನಿರೀಕ್ಷಿಸ್ತಿದ್ದಾರೋ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಟ್ರೋಲ್ ಮಾಡುವವರಿಗೆ ಉತ್ತರ ಕೊಡೋ ಅಗತ್ಯ ನನಗಿಲ್ಲ ಎಂದಿದ್ದಾರೆ.