ಕರ್ನಾಟಕದ ಗುಲ್ಬರ್ಗದಲ್ಲಿರುವ ಅಲ್ ಖಮರ್ ನರ್ಸಿಂಗ್ ಕಾಲೇಜ್ ನ 19ನೆ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ 3ನೇ ವರುಷದ ಸೀನಿಯರ್ ಹುಡುಗಿಯರ 8 ಮಂದಿಯ ತಂಡವು ರ‍್ಯಾಗಿಂಗ್ ಹೆಸರಲ್ಲಿ ದೌರ್ಜನ್ಯವೆಸಗಿತು. ರ‍್ಯಾಗಿಂಗ್ ಗೊಳಪಟ್ಟ ವಿದ್ಯಾರ್ಥಿನಿ ಈಗ ಕೋಝಿಕ್ಕೋಡಿನ ಮೆಡಿಕಲ್ ಕಾಲೇಜ್ ನಲ್ಲಿ ತೀವ್ರ ನಿಗಾ ಘಟಕದಡಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಯಲ್ಲಿ ಹಲವು ದಿನಗಳಿಂದಲೂ ಈ ವಿದ್ಯಾರ್ಥಿನಿಯ ಮೇಲೆ ರ‍್ಯಾಗಿಂಗ್ ನಡೆಯುತ್ತಿದ್ದು, ಇದನ್ನು ಈಕೆ ಯಾರ ಗಮನಕ್ಕೂ ತಾರದ ಕಾರಣ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಿ ಬಂತು. ಈಕೆಯ ಕೈಗಳೆರಡನ್ನೂ ಬಲವಂತವಾಗಿ ಹಿಡಿದು ಟಾಯ್ಲೆಟ್ ಶುಚಿ ಮಾಡುವ ಫಿನೈಲ್ ನ್ನು ಈಕೆಯ ಬಾಯಿಗೆ ಸುರಿಯಲಾಗಿದೆ. ಇದರಿಂದ ಈಕೆಯ ಅನ್ನ ನಾಳವು ತೀವ್ರವಾಗಿ ಹಾನಿಗೊಳಗಾಗಿದ್ದು, ಅವಳಿಗೆ ಸರಿಯಾಗಿ ಮಾತಾಡಲೂ ,ಜೊಲ್ಲು ನುಂಗಲೂ ಕಷ್ಟಕರವಾಗಿದೆ. ಈಕೆಗಿನ್ನೂ ನಾಲ್ಕು ತಿಂಗಳ ವಿಶ್ರಾಂತಿ ಬೇಕಾಗಿದೆ.
ಕಾಲೇಜಿನ ಪ್ರಿನ್ಸಿಪಾಲ್ ಇದ್ಯಾವುದನ್ನೂ ಒಪ್ಪುತ್ತಿಲ್ಲ. ಅವ್ರು ಹೇಳೋ ಪ್ರಕಾರ ಈಕೆ ಆತ್ಮಹತ್ಯೆ ಮಾಡಿದಳು ಎಂಬುದಾಗುತ್ತೆ. ತಮ್ಮ ಕಾಲೇಜಿನ ಪ್ರತಿಷ್ಟೆಗಾಗಿ ನಿಜ ವಿಷಯವನ್ನು ಮರೆ ಮಾಚೋ ಇಂತಹವರಿಂದಲೇ ಇನ್ನಷ್ಟು ದೌರ್ಜನ್ಯಕ್ಕೆಡೆಮಾಡಿಕೊಟ್ಟಂತೆ ಆಗುತ್ತದೆ.
ಈಕೆ ಕೇರಳದಲ್ಲಿ ವಾಸವಾಗಿರೋ ಬಡ ಕುಟುಂಬದ ಹುಡುಗಿ. ಈಕೆಯ ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಹಾಗೂ ಇವಳ ವಿದ್ಯಾಭ್ಯಾಸಕ್ಕಾಗಿ 3 ಲಕ್ಷ ಸಾಲ ಮಾಡಿ 5 ತಿಂಗಳ ಹಿಂದಷ್ಟೆ ಈಕೆಯನ್ನು ಕಾಲೇಜಿಗೆ ಸೇರಿಸಲಾಗಿತ್ತು. ಈಕೆಯ ಮನೆಯವರಿಗೆ ಪಾಪ ಇದ್ಯಾವುದರ ಅರಿವೂ ಇಲ್ಲ; ಇವಳ ಈ ಪರಿಸ್ಥಿತಿ ನೋಡಿ ಕಂಗಾಲು ಆದ ಅವ್ರು ನ್ಯಾಯಕ್ಕೋಸ್ಕರ ಆ ಹುಡುಗಿಯರ ಮೇಲೆ ಕೇರಳ ಪೋಲಿಸರ ಬಳಿ ಕೇಸು ದಾಖಲಿಸಿದ್ದಾರೆ. ಕೇರಳ ಪೋಲಿಸ್ ಅಧಿಕಾರಿಗಳು ಗುಲ್ಬರ್ಗಕ್ಕೆ ತೆರಳಿ ಕೇಸನ್ನು ಗುಲ್ಬರ್ಗ ಪೋಲಿಸ್ ರಿಗೆ ಹಸ್ತಾಂತರಿಸಿದ್ದಾರೆ. ಗುಲ್ಬರ್ಗ ಪೋಲಿಸ್ ದಳವು ಕೇಸಿನ ಬಗೆಗಿನ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾದಳವನ್ನು ನೇಮಿಸಲಾಗಿದೆ ಎಂದು ತಿಳಿಸಿದೆ.
POPULAR STORIES :
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ಸಲ್ಮಾನ್ ಗಿದೋ ಬಿಸಿ ಬಿಸಿ ಕಜ್ಜಾಯ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ