ಸ್ಯಾಂಡಲ್ ವುಡ್ ನಟ ರಘುಭಟ್ ಇಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಮಂಗಳೂರಿನಲ್ಲಿಂದು ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರುತ್ತಿದೆ. ಚಿತ್ರರಂಗ, ಮಾಧ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಕುಟುಂಬಸ್ಥರು, ಆಪ್ತರು, ಹಿತೈಷಿಗಳ ಸಮ್ಮುಖದಲ್ಲಿ ರಘು ಭಟ್ ತಾ ಮೆಚ್ಚಿದ ಹುಡುಗಿ ಸುಗುಣ ಅವರನ್ನು ವರಸಿದರು.
ಸುಗುಣ ಬಿ.ಸಿ.ಅವರು ಎಂಕಾಂ ಪೂರೈಸಿದ್ದಾರೆ. ಮೂಲತಃ ನೆಲಮಂಗಲ ಮೂಲದವರಾದ ಸುಗುಣರವರು ಕಾರ್ಯಕ್ರಮವೊಂದರಲ್ಲಿ ರಘುಭಟ್ ಅವರಿಗೆ ಪರಿಚಿತರಾಗಿದ್ದು, ಪರಿಚಯ ಸ್ನೇಹ, ಸ್ನೇಹ ಪ್ರೀತಿಗೆ ತಿರಿಗಿ, ಕುಟುಂಬದ ಒಪ್ಪಿಗೆ ಪಡೆದು ನವಜೀವನ ಆರಂಭಿಸಿದ್ದಾರೆ.
ರಘುಭಟ್, ಕೃಷ್ಣ ಲೀಲೆ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಬಾಲ ನಟನಾಗಿ ಕಾಣಿಸಿಕೊಂಡಿದ್ದ ರಘುಭಟ್ ಈಗ ಹಂತಹಂತವಾಗಿ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ರಾಮ ಕೃಷ್ಣ ಗೋವಿಂದ ಸಿನಿಮಾ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಇವರು, ಆ ನಂತರ ತಾರೆ , ಪಾರು ವೈಫ್ ಆಫ್ ದೇವದಾಸ್, ರಘುವೀರ ಚಿತ್ರಗಳಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ತೆರೆಕಂಡ ಅನ್ವೇಷಿ, ಡ್ರೀಂಗರ್ಲ್, ಲವ್ ಯು 2, ಎಂಎಂಸಿಎಚ್ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. ದಾದಾ ಈಸ್ ಬ್ಯಾಕ್ ಸಿನಿಮಾದಲ್ಲಿ ನೆಗಿಟೀವ್ ಶೇಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಕರ್ವ, ನನ್ನ ನಿನ್ನ ಪ್ರೇಮಕಥೆ, ಬಕಾಸುರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.