ಮೀ ಟೂ ಅಭಿಯಾನಕ್ಕೆ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಬೆಂಬಲ ಸೂಚಿಸಿದ್ದಾರೆ.
ಹುಡುಗ, ಹುಡುಗಿಯರಿಗೆ ಯಾರಿಗೆ ಆದರೂ ಅದು ದೌರ್ಜನ್ಯವೇ. ತಪ್ಪು ಆಗಿದ್ದರೆ ಶಿಕ್ಷೆ ಆಗಲೇಬೇಕು. ಆದರೆ ಮೀ ಟೂ ಅನ್ನು ಕೆಲವರು ದುರುಪಯೋಗ ಪಡಿಸಿಕೊಳ್ತಿದ್ದಾರೆ. ಶ್ರುತಿಗೆ ನಿಜವಾಗಿಯೂ ದೌರ್ಜನ್ಯ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.
ಶ್ರುತಿ ಹರಿಹರನ್ ಒಳ್ಳೆ ಹುಡುಗಿ. ಆಕೆ ಯಾವತ್ತೂ ಅಸಂಬದ್ಧ ಮಾತಾಡಿಲ್ಲ. ಆಚೆ ಬಂದು ಮಾತನಾಡುವುದು ಒಳ್ಳೆಯದು. ಸುಮ್ಮನೇ ಬಂದು ಯಾರು ಕೂಡ ಮಾತನಾಡುವುದಿಲ್ಲ. ನಾನು ಯಾರ ಪರವಾಗಿಯೂ ಇಲ್ಲಿ ಮಾತನಾಡುತ್ತಿಲ್ಲ ಎಂದಿದ್ದಾರೆ ರಾಗಿಣಿ.