ಸಿಲಿಕಾನ್‌ ಸಿಟಿ ಈಗ ಪ್ರವಾಹ ಸಿಟಿ

Date:

ಸಿಲಿಕಾನ್‌ ಸಿಟಿ, ಗಾರ್ಡನ್‌ ಸಿಟಿ ಹೀಗೆಲ್ಲಾ ಕರೆಯಲ್ಪಡುತ್ತಿರುವ ಬೆಂಗಳೂರು ಇದೀಗ ಪ್ರವಾಹ ಸಿಟಿಯಾಗಿ ಮಾರ್ಪಟ್ಟಿದೆ. ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಇತ್ತೀಚಿನ ದಿನಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ. ಇನ್ನೂ ನಗರದಲ್ಲಿ ತಡರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಪ್ರಮುಖ ಶಾಪಿಂಗ್ ರಸ್ತೆಗಳಾದ ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆಜಿ ರಸ್ತೆ, ಶಿವಾಜಿನಗರದ ರಸ್ತೆಗಳು ಪ್ರವಾಹದ ಪರಿಸ್ಥಿತಿಯಲ್ಲಿದೆ.

 

ಇನ್ನೂ ನಗರದಲ್ಲಿ ಸುರಿದ ಜೋರು ಮಳೆಗೆ ರಸ್ತೆಗಳು ಗುಂಡಿಗಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನರಕಯಾತನೆ ಪಡುವಂತಾಗಿದೆ. ಅದರಂತೆ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿಯ ಸುಲ್ತಾನಪೇಟೆಯಲ್ಲೂ ಮಳೆಯ ಅವಾಂತರದಿಂದ ಗಣೇಶ ಎಂಬಾತ ತೆರೆದ ಮ್ಯಾನ್ ಹೋಲ್ ಗೆ ಬಿದ್ದು ಜೀವಕಳೆದುಕೊಂಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದ ವರ್ತಕರು ಇಂದು ಪ್ರತಿಭಟನೆ ನಡೆಸಿದ್ದು,
ರಸ್ತೆ, ಚರಂಡಿ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಮಳೆಬಂದಾಗ ರಸ್ತೆಗಳು
ಕೆರೆಯಂತಾಗುತ್ತದೆ. ಭಾರಿ ಮಳೆ ಹಾಗೂ ಕಳಪೆ ಮೂಲಸೌಕರ್ಯಗಳಿಂದಾಗಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ ಎಂದು ಚಿಕ್ಕಪೇಟೆ ವರ್ತಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...