ಪರ್ಷಿಯಾ ಕೊಲ್ಲಿ ಭಾಗದಲ್ಲಿರುವ ಕುವೈಟ್ ನಗರ ಅಕ್ಷರಶಃ ಮಳೆಯಿಂದ ನಲುಗಿದೆ. ಮರುಭೂಮಿ ನಾಡು ಕುವೈಟ್ ನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ .
ಗಗನ ಚುಂಬಿ ಕಟ್ಟಡಗಳಿಂದ ಕೂಡಿದ ಕುವೈತ್ ಸರಿಯಾದ ಮೂಲಸೌಕರ್ಯಗಳನ್ನು ಹೊಂದಿರದ ಕಾರಣ ನೀರಿನಲ್ಲಿ ತೇಲಾಡುತ್ತಿದೆ. ಜನರ ಕಷ್ಟಗಳನ್ನು ನೋಡಲಾಗದೆ ಬೇಸತ್ತು ಲೋಕೋಪಯೋಗಿ ಸಚಿವ ರಾಜೀನಾಮೆ ನೀಡಿದ್ದಾರೆ.