ರಾಜಧಾನಿ ಬೆಂಗಳೂರಿನಲ್ಲಿ ಸುರಿದ ರಣಭೀಕರ ಮಳೆಗೆ ನಗರದ ಮಹದೇವಪುರವಲಯ ಅಕ್ಷರಶಃ ತತ್ತರಿಸಿ ಹೋಗಿದೆ. ಅಕಾಲಿಕ ಮಳೆಯಿಂದ ಬಡಾವಣೆಗಳೆಲ್ಲಾ ಜಲಾವೃತವಾಗಿದ್ದು, ನಿವಾಸಿಗಳ ಪರದಾಟ ಹೇಳತ್ತೀರದ್ದಾಗಿದೆ. ಈ ಹಿನ್ನೆಲೆ ಕ್ಷೇತ್ರದ ಕಾಡುಗೋಡಿಯಲ್ಲಿ ಜಲಾವೃತ್ತದಿಂದ ಸಂಕಷ್ಟದಲ್ಲಿರುವ ರಾಮಯ್ಯ ಗಾರ್ಡನ್ ಹಾಗೂ ಸಿದ್ದಾರ್ಥ ಬಡಾವಣೆಗೆ ಸ್ಥಳೀಯ ಶಾಸಕ ಅರವಿಂದ್ ಲಿಂಬಾವಳಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ನಿವಾಸಿಗಳಿಗೆ ಕಾಳಜಿ ಕೇಂದ್ರ ಸ್ಥಾಪನೆ ಮಾಡಿ, ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಅವರ ಸಮಸ್ಯೆ ಆಲಿಸಿದರು. ಹಾಗೂ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು, ಮುಖಂಡರು, ಅಧಿಕಾರಿಗಳು, ಕಾರ್ಯಕರ್ತರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಕ್ಷರಶಃ ತತ್ತರಿಸಿ ಹೋಯ್ತು ಮಹದೇವಪುರ
Date: