ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಅವರು ಈಗ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲೂ ಬೇಡಿಕೆ ಪಡೆದಿದ್ದಾರೆ.

ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ನಟಿಸಿ ತೆಲುಗು ಅಭಿಮಾನಿಗಳ ಮನಗೆದ್ದ ಈ ಚೆಲುವಿಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಂದ ಅವಕಾಶ ಬಂದಿದೆ. ಬಾಹುಬಲಿ ಬಳಿಕ ಮೆಗಾ ಸಿನಿಮಾ ಕೈಗೆತ್ತಿಕೊಂಡಿರುವ ರಾಜ್ ಮೌಳಿ ತೆಲುಗಿನ ಇಬ್ಬರು ಸ್ಟಾರ್ ನಟರ ಜೊತೆ ಮುಂದಿನ ಸಿನಿಮಾಮಾಡ್ತಿದ್ದಾರೆ.

ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿ ಆರ್ ಈ ಚಿತ್ರದ ನಾಯಕರು. ಇಬ್ಬರಲ್ಲಿ ಒಬ್ಬರ ಜೋಡಿಯಾಗಿ ರಶ್ಮಿಕ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.



