ಧನುಷ್ ಮತ್ತು ಐಶ್ವರ್ಯ ವಿಚ್ಛೆದನದಲ್ಲಿ ಬದಲಾವಣೆ ಆಗಿದ್ದು ಯಾಕೆ ?

Date:

ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಡಿವೋರ್ಸ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು . ಅವರ 19 ವರ್ಷಗಳ ತಮ್ಮ ದಾಂಪತ್ಯಕ್ಕೆ ಇತಿಶ್ರೀ ಹೇಳಿದ್ದರು . ಈ ಜೋಡಿಯ ವಿಚ್ಛೇದನ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಅಲ್ಲದೇ. ಐಶ್ವರ್ಯಾ ಮತ್ತು ಧನುಷ್ ಡೈವೋರ್ಸ್​ ವಿಚಾರ ರಜನಿಕಾಂತ್ ಅಭಿಮಾನಿಗಳನ್ನೂ ತೀವ್ರವಾಗಿ ಕಾಡಿತ್ತು.

ಧನುಷ್ ತನ್ನ ಕೆಲಸವನ್ನು ತಾನೇ ಮಾಡಿಕೊಂಡರೆ, ಐಶ್ವರ್ಯಾ ಕೂಡ ತಂದೆ ರಜನಿಕಾಂತ್ ಅವರಂತೆ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆದರೀಗಈಗ ಧನುಷ್ ಹಾಗೂ ಐಶ್ವರ್ಯ ಬಗ್ಗೆ ಹೊರ ಬಂದಿರುವ ವರದಿ ಅವರ ಮತ್ತು ರಜನಿಕಾಂತ್ ಅಭಿಮಾನಿ ಗಳಿಗೆ ಸಮಾಧಾನ ಕೊಟ್ಟಿದೆ. ಸದ್ಯಕ್ಕೆ ಅವರು ತಮ್ಮ ವಿಚ್ಛೇದನದ ನಿರ್ಧಾರವನ್ನು ತಡೆಹಿಡಿಯಲು ನಿರ್ಧರಿಸಿದ್ದಾರೆಂದು ವರದಿಗಳು ಉಲ್ಲೇಖಿಸಿವೆ.

ತಮ್ಮ ನಡುವಿನ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಿರುವ ದಂಪತಿ ವಿಚ್ಛೇದನವನ್ನು ತಡೆಹಿಡಿಯಲು ನಿರ್ಧರಿಸಿದ್ದಾರಂತೆ. ಧನುಷ್ ಮತ್ತು ಐಶ್ವರ್ಯಾ ಅವರ ಕುಟುಂಬ ಸದಸ್ಯರು ರಜನಿಕಾಂತ್ ಅವರ ಮನೆಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ದಂಪತಿ ತಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದ್ದಾರಂತೆ . ತಮ್ಮ ದಾಂಪತ್ಯ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ರಜನಿಕಾಂತ್ ಕೂಡ ಈ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದರು. ತಮಗೆ ಇದರಿಂದ ಸಮಾಧಾನವಿಲ್ಲ ಎಂದು ಹೇಳಿದ್ದರು. ಮಗಳು ಮತ್ತು ಅಳಿಯನ ವಿಚ್ಛೇದನದ ನಂತರ ರಜನಿಕಾಂತ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ‌ .
ಇದೀಗ ರಜನಿ ಮತ್ತೊಮ್ಮೆ ತಮ್ಮ ಮಗಳು ಮತ್ತು ಅಳಿಯನನ್ನು ಒಂದಾಗಿಸಲು ತೀವ್ರ ಪ್ರಯತ್ನ ನಡೆಸುತ್ತಿರುವಂತಿದೆ. ಐಶ್ವರ್ಯಾ ಅವರನ್ನು ಧನುಷ್ ಭೇಟಿಯಾದರೆ ಅವರಿಗೆ ಬೇರೆ ಖುಷಿ ಇಲ್ಲವಂತೆ . ತಮಿಳುನಾಡಿನ ರಜನಿ ಜೊತೆಗೆ ಧನುಷ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ವಿಚ್ಛೇದನ ವಿಚಾರದಲ್ಲಿ ಧನುಷ್ ಹಿಂದೆ ಸರಿದಿರುವ ಸುದ್ದಿಯಿಂದ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...