ಈ ಜೀವಿ ಭೂಮಿಯೊಳಗೆ ಸಿಕ್ಕಿತ್ತಂತೆ..! ಮನುಷ್ಯನಂತಿರೋ ಈ ಜೀವಿ ಯಾವುದಯ್ಯಾ..?

Date:

ನೋಡೋಕೆ ಪುಟ್ಟ ಮಗುವಿನ ದೇಹ, ಕೈಕಾಲುಗಳೂ ಇವೆ, ಮುಖ ಮಾತ್ರ ಕಪ್ಪೆಯ ಆಕಾರ..! ಇದ್ಯಾವ ಜೀವಿ..? ಇದು ರಾಜಸ್ಥಾನದಲ್ಲಿರೋ ಜೋದ್ಪುರದಲ್ಲಿ ಸಿಕ್ಕದ ಜೀವಿಯಂತೆ.. ಕಳೆದ ಒಂದು ವಾರದಿಂದ ಫೇಸ್ ಬುಕ್, ವಾಟ್ಸಪ್ ನಲ್ಲಿ ಈ ಫೋಟೋಗಳು ತುಂಬ ಓಡಾಡ್ತಾ ಇದೆ. ಜೋದ್ಪುರದ ಸಮಿಪದಲ್ಲಿರು ಬವಡಿ ಅನ್ನೊ ಊರಿನಲ್ಲಿ ಕೊಳವೆ ಬವಿ ಕೊರೆಯೋ ಟೈಮಲ್ಲಿ ಭೂಮಿಯ ಒಳಗಡೆ ಈ ಜೀವಿ ಸಿಕ್ಕಿದಿಯಂತೆ..! ಈ ಮನುಷ್ಯ ರೂಪದ ಜೀವಿಗೆ ಎರಡು ಕೈ, ಎರಡು ಕಾಲು ಹಾಗು ಕೈ ಕಾಲುಗಳಲ್ಲಿ ನಾಲ್ಕು ಬೆರಳುಗಳೂ ಇದೆಯಂತೆ..! ಈ ಫೋಟೋದಲ್ಲಿ ಯಾವುದೇ ರೀತಿಯ ಫೋಟೋಶಾಪ್ ಕಾರ್ಯ ನಡೆದಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ..! ಹಾಗಾದ್ರೆ ಈ ಜೀವಿ ಯಾವುದು..? ಅದು ಭೂಮಿಯ ಒಳಗೆ ಸಿಕ್ತು ಅಂತ ಹೇಳೋ ಆ ಹಳ್ಳಿಗರು ಮಾತು ನಿಜಾನಾ..? ಅಥವಾ ಯಾವುದಾದರೂ ತಾಯಿ ಭ್ರೂಣಹತ್ಯೆ ಮಾಡಿ ಹೀಗೆ ಭ್ರೂಣ ಎಸೆದು ಹೋಗಿರಬಹುದಾ..? ಹಾಗಾಗಿದ್ದರೆ ಅದರ ಮುಖ ಹಾಗಿರೋಕೆ ಸಾಧ್ಯವಿಲ್ಲ ಅನ್ನುತ್ತಾರೆ ವೈದ್ಯರು..! ಕೆಲವರು ಏಲಿಯನ್ ಇರಬಹುದೇನೋ ಅಂತ ಸೋಶಿಯಲ್ ನೆಟ್ ವರ್ಕ್ ನಲ್ಲಿ ಚರ್ಚೆ ಮಾಡ್ತಿದ್ದಾರೆ..! ಯಾವುದು ಸತ್ಯ..? ಯಾವುದು ಸುಳ್ಳು..? ಸದ್ಯಕ್ಕೆ ಈ ಫೋಟೋ ಅಂತೂ ಎಲ್ಲಾ ಕಡೆ ಬಿಸಿಬಿಸಿ ಚರ್ಚೆ ಗೆ ಕಾರಣವಾಗಿರೋದಂತೂ ಸತ್ಯ..!

-ಕೀರ್ತಿ ಶಂಕರಘಟ್ಟ

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...