ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿ ನೂರ ಎಂಟು ದಿನಗಳು ಕಾಡಿನಲ್ಲಿಟ್ಟಿದ್ದ ನರಹಂತಕ ವೀರಪ್ಪನ್ ರಜನಿಕಾಂತ್ ಅವರನ್ನು ಅಪಹರಿಸಲು ಸಿದ್ದತೆ ನಡೆಸಿದ್ದ ಎಂಬ ಬೆಚ್ಚಿಬೀಳಿಸುವ ರಿಸರ್ಚ್ ಅನ್ನು ಆರ್.ಜಿ.ವಿ ಮಾಡಿದ್ದಾರೆ. ಆರ್ಜಿವಿ ಅಂದ್ರೆ ಗೊತ್ತಲ್ವಾ..? ರಾಮ್ ಗೋಪಾಲ್ ವರ್ಮ. ಇತ್ತೀಚೆಗೆ ಕನ್ನಡದಲ್ಲಿ ಕಿಲ್ಲಿಂಗ್ ವೀರಪ್ಪನ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಆರ್.ಜಿ.ವಿ, ಈಗ ಹಿಂದಿಯಲ್ಲಿ ವೀರಪ್ಪನ್ ಹೆಸರಿನ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆ. ಆ ಚಿತ್ರದಲ್ಲಿ ವೀರಪ್ಪನ್ ರಜನಿಕಾಂತ್ ಅವರನ್ನು ಕಿಡ್ನಾಪ್ ಮಾಡಲು ರೂಪುರೇಷೆ ಸಿದ್ದಪಡಿಸಿದ್ದ ಎಂಬ ಎಳೆಯನ್ನಿಟ್ಟುಕೊಂಡು ನಿರ್ದೇಶಿಲಾಗಿದೆಯಂತೆ. ಕಾನೂನಿಗೆ ಗೊತ್ತಿರದ ಈ ಹಕೀಕತ್ತೇನು ಎಂಬ ಪ್ರಶ್ನೆಗೆ ಇದು ನನ್ನದೇ ರಿಸರ್ಚ್ ಎನ್ನುತ್ತಿದ್ದಾರೆ ರಾಮ್ ಗೋಪಾಲ್ ವರ್ಮ. ರಜನಿಕಾಂತ್ ಅವರನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ಯಾ ಅಂತ ವೀರಪ್ಪನ್ ನನ್ನು ಕೇಳೋಣ ಅಂದರೇ ಆತ ಬದುಕಿಲ್ಲ. ಹಾಗಾಗಿ ವರ್ಮ ಹೇಳಿದ್ದೇ ಸತ್ಯ ಅಂತ ನಂಬಬೇಕು. ಇನ್ನೇನು ಮಾಡೋಣ ಹೇಳಿ..!
- ರಾ ಚಿಂತನ್
POPULAR STORIES :
ಅರಬ್ ರಾಷ್ಟ್ರಗಳಲ್ಲಿ ಅಮಾನವೀಯತೆ..! ನರಳುತ್ತಿದ್ದಾಳೆ ಚಿಕ್ಕಮಗಳೂರಿನ ನಾಜಿಯಾ..!
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?