ಮತ್ತೆ ಏರಿದ ಪೆಟ್ರೋಲ್ ದರ; ಸಾಮಾನ್ಯ ಜನರ ಸ್ಥಿತಿ ಹರೋಹರ

1
44

ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಜುಲೈ 4ರಂದು ಇಂಧನ ದರ ಪರಿಷ್ಕರಣೆ ಮಾಡಿವೆ. ಮೇ 4ರಿಂದ ಇಂದಿನ ತನಕ ಒಟ್ಟು 35 ಬಾರಿ ಹಾಗೂ ಜೂನ್ ತಿಂಗಳಲ್ಲೇ 17 ಬಾರಿ ಬೆಲೆ ಏರಿಕೆ ಮಾಡಲಾಗಿದೆ. ಜುಲೈ 05ರಂದು ಪೆಟ್ರೋಲ್ ಬೆಲೆ ಸರಾಸರಿ 31 ರಿಂದ 39 ಪೈಸೆ ಪ್ರತಿ ಲೀಟರ್ ಏರಿಕೆ ಕಂಡಿದೆ, ಡೀಸೆಲ್ ಬೆಲೆ ಏರಿಕೆಯಾಗಿಲ್ಲ. ಒಟ್ಟಾರೆ, ಬೆಲೆ ಸುಮಾರು 9.11 ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 8.63 ರು ಪ್ರತಿ ಲೀಟರ್ ನಂತೆ ಏರಿಕೆ ಕಂಡಿದೆ. ಜುಲೈ 04ರಂದು ಪೆಟ್ರೋಲ್ 35 ಪೈಸೆ ಹಾಗೂ ಡೀಸೆಲ್ ಬೆಲೆ 18 ಪೈಸೆ ಪ್ರತಿ ಲೀಟರ್ ಏರಿಕೆಯಾಗಿತ್ತು.


ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 105.92ರು ಪ್ರತಿ ಲೀಟರ್, ಡೀಸೆಲ್ 96.91ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ಸತತವಾಗಿ ಪೆಟ್ರೋಲ್ ದರ 100ರು ಗಡಿ ದಾಟಿದೆ.
ಪೆಟ್ರೋಲ್ ಪ್ರತಿ ಲೀಟರ್‌ಗೆ 105 ರು:
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 103.20ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 94.54ರೂಪಾಯಿಗೆ ಮುಟ್ಟಿದೆ. ಚಿಕ್ಕಮಗಳೂರಿನಲ್ಲಿಪೆಟ್ರೋಲ್ ಪ್ರತಿ ಲೀಟರ್‌ಗೆ ಅತ್ಯಧಿಕ 105.15ರು ಇದ್ದು, ರಾಜ್ಯದಲ್ಲೇ ಅತ್ಯಧಿಕವಾಗಿದೆ. ಬಳ್ಳಾರಿಯಲ್ಲಿ 105.09ರು ಇದೆ. ಎಂದು ಗುಡ್ ರಿಟರ್ನ್ಸ್.ಇನ್ ವರದಿ ಮಾಡಿದೆ.


ಕಚ್ಚಾತೈಲ ಬೆಲೆ ಮೇ 2020ರಲ್ಲಿ 31 ಯುಎಸ್ ಡಾಲರ್ ಇದ್ದಿದ್ದು ಈಗ ಸರಾಸರಿ 75ಡಾಲರ್ ಆಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರ ಕೂಡಾ ಪೆಟ್ರೋಲ್ ಮೇಲೆ 13 ರು, ಡೀಸೆಲ್ ಮೇಲೆ 16 ರು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡು 76.10ಯುಎಸ್ ಡಾಲರ್(1 USD=74.53ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಮೇ 1, 2020ರಂದು ದೆಹಲಿಯಲ್ಲಿ ಪೆಟ್ರೋಲ್ ದರ 69.59ರು ಇತ್ತು, ಡೀಸೆಲ್ ರೀಟೈಲ್ ದರ 62.29 ರು ಇತ್ತು. ಜೊತೆಗೆ ತೆರಿಗೆ ರಹಿತ ದರ 27.95 ಪ್ರತಿ ಲೀಟರ್, ಡೀಸೆಲ್ 24.85ಪ್ರತಿ ಲೀಟರ್ ನಷ್ಟಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಜುಲೈ 05) ಸಚಿತ್ರ ಮಾಹಿತಿ ಇಲ್ಲಿದೆ.

1 COMMENT

LEAVE A REPLY

Please enter your comment!
Please enter your name here