ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಅಭಿನಯದ ರಾಜು ಕನ್ನಡ ಮೀಡಿಯಂ ಸಿನಿಮಾ ರಿಲೀಸ್‍ಗೆ ಕಂಟಕ ಎದುರಾಗಿದೆ…! ಈ ವಿಘ್ನ ಉಂಟು ಮಾಡಿರೋದು ಚಿತ್ರತಂಡದವರೇ…!
ಹೌದು, ರಾಜು ಕನ್ನಡ ಮೀಡಿಯಂಗೆ ಬಂಡವಾಳ ಹಾಕಿದವರ ನಡುವೆ ಈಗ ಮನಸ್ತಾಪ ಉಂಟಾಗಿದೆ..! ಸುರೇಶ್ ಮತ್ತು ಲಕ್ಷೀಪತಿ ಬಾಬು ಸಿನಿಮಾಕ್ಕೆ ಬಂಡವಾಳ ಮಾಡಿಕೊಂಡಿದ್ದರು. ಇಬ್ಬರು ಬಂಡವಾಳ ಹೂಡಿದ್ದರೂ ಸುರೇಶ್ ಆಟ್ರ್ಸ್ ಬ್ಯಾನರ್‍ನ ಅಡಿ ಬಿಡುಗಡೆ ಮಾಡಲು ಒಪ್ಪಂದವೂ ಆಗಿತ್ತಂತೆ..! ಆದರೆ, ಇದೀಗ ತಾವು ಶೇ.60ರಷ್ಟು ಬಂಡವಾಳವನ್ನು ಹಾಕಿದ್ದು, ಕೇವಲ ಸುರೇಶ್ ತಮ್ಮ ಬ್ಯಾನರ್ ಹೆಸರಲ್ಲಿ ಸಿನಿಮಾವನ್ನು ತೆರೆಗೆ ತರಲು ಮುಂದಾಗಿದ್ದಾರೆ ಎಂದು ಲಕ್ಷ್ಮೀಪತಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರಾಜು ಕನ್ನಡ ಮೀಡಿಯಂ ಸಿನಿಮಾವನ್ನು ನರೇಶ್ ಕುಮಾರ್ ನಿರ್ದೇಶಿಸಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಾಧುಕೋಕಿಲ, ಓಂ ಪ್ರಕಾಶ್, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತಿತರರು ನಟಿಸಿದ್ದಾರೆ. ಹಾಡೊಂದರಲ್ಲಿ ಕಿರಿಕ್ ಕೀರ್ತಿ ಮತ್ತು ಒಳ್ಳೆಯ ಹುಡುಗ ಪ್ರಥಮ್ ಕೂಡ ಹೆಜ್ಜೆ ಹಾಕಿದ್ದಾರೆ.