ಕಿರಿಕ್ ಪಾರ್ಟಿ ಡೈರೆಕ್ಟರ್ ರಕ್ಷಿತ್ ಶೆಟ್ಟಿ ಬಿಗ್ ಬಜೆಟ್ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಪುಣ್ಯಕೋಟಿ ಅನ್ನೋ ಸಿನಿಮಾ ರಕ್ಷಿತ್ ಮಾಡಲಿರುವ ಬಿಗ್ ಬಜೆಟ್ ಚಿತ್ರ.
ಯುದ್ಧದ ಕಥೆಗಳನ್ನು ಹೋಲುವ ಚಿತ್ರ ಪುಣ್ಯಕೋಟಿ ಎಂದು ಹೇಳಲಾಗುತ್ತಿದ್ದು 100ಕೋಟಿ ರೂ ಬಜೆಟ್ ನ ಸಿನಿಮಾ ಎಂದು ಹೇಳಲಾಗುತ್ತಿದೆ.
ಪುಣ್ಯಕೋಟಿಗೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ರಕ್ಷಿತ್ ನಾಯಕನಾಗಿಯೂ ಬಣ್ಣ ಹಚ್ಚುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಬಿಗ್ ಬಜೆಟ್ ಸಿನಿಮಾಗಳು ಬರುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಡಿಸೆಂಬರ್ 21 ಕ್ಕೆ ರಿಲೀಸ್ ಆಗುತ್ತಿರುವ ಕೆಜಿಎಫ್ ನ ಬಜೆಟ್ 80 ಕೋಟಿ ರೂ.
ಈಗ ರಕ್ಷಿತ್ ನಾವು 100 ಕೋಟಿ ಬಜೆಟ್ ಸಿನಿಮಾ ಮಾಡ್ತುದ್ದೀವಿ ಎಂದು ಹೇಳುತ್ತಿದ್ದಾರೆ.