ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲು ಮುಂದಾಗಿರುವ ವಿಚಾರ, ಸಿಎಂ ಕ್ಯಾಂಡಿಡೇಟ್ ಆದವರು ಸುರಕ್ಷಿತ ಕ್ಷೇತ್ರಕ್ಕೆ ಹುಡುಕಾಟ ನಡೆಸಿದ ವಿಚಾರ ಚರ್ಚಾಸ್ಪದವಾಗಿದ್ದು ಸರಿಯಲ್ಲ ಎಂದು ಶಾಸಕ S.A.ರಾಮದಾಸ್ ತಿಳಿಸಿದ್ರು. ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಅವರವರ ಇಚ್ಛೆಯಾಗಿರುತ್ತದೆ. ನಮ್ಮ ಜಿಲ್ಲೆಯವರೊಬ್ಬರು ಸಿಎಂ ಆಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಸಿದ್ದರಾಮಯ್ಯ ಹಿರಿಯರು, ಅವರ ಬಗ್ಗೆ ಅಪಾರ ಗೌರವವಿದೆ. ಅವರು ಕೋಲಾರದಿಂದ ಸ್ಪರ್ಧಿಸಿದ್ರೆ ಮೈಸೂರು ಭಾಗದಲ್ಲಿ ಯಾವುದೇ ಪರಿಣಾಮ ಬೀರಲ್ಲ. ಏಕಂದ್ರೆ ಎಲ್ಲಾ ಪಕ್ಷಗಳು ತತ್ವ, ಸಿದ್ಧಾಂತ ಆಧಾರದ ಮೇಲೆ ಚುನಾವಣೆ ಎದುರಿಸುತ್ತವೆ. ಇನ್ನ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೂ ಮುನ್ನ ಎನ್.ಆರ್ ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲು ಶಾಸಕ ತನ್ವೀರ್ ಸೇಠ್ ಮುಂದಾಗುವ ಅವಶ್ಯಕತೆಯಿದೆ. ತನ್ವೀರ್ ಸೇಠ್ ನನ್ನ ಒಳ್ಳೆಯ ಗೆಳೆಯನಾಗಿದ್ದು, ಟಿಪ್ಪು ಪ್ರತಿಮೆ ನಿರ್ಮಾಣದಿಂದ NR ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲಾಗಲ್ಲ. ಪ್ರತಿಯೊಂದು ಧರ್ಮದ ಸಾರ ಅಹಿಂಸೆಯಾಗಿದ್ದು, ಇದುವರೆಗೆ ಯಾರೊಬ್ಬರೂ ಸಂಪೂರ್ಣ ಕುರಾನ್ ಓದಿ ಅರ್ಥೈಸಿಕೊಂಡಿಲ್ಲ. ಇಸ್ಲಾಂ ಧರ್ಮದಲ್ಲಿ ಮೂರ್ತಿಯ ಪೂಜೆಗೆ ಅವಕಾಶವಿಲ್ಲ. ಆದ್ರೂ, ರಾಜಕೀಯ ಲಾಭಕ್ಕಾಗಿ ಟಿಪ್ಪು ಪ್ರತಿಮೆ ನಿರ್ಮಿಸುತ್ತೇನೆ ಎನ್ನುವುದು ಸರಿಯಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.