ಪೆಟ್ರೋಲ್ ದರ ಹೆಚ್ಚಳಕ್ಕೂ ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಗೂ ಎತ್ತಣದೆತ್ತಣದ ಸಂಬಂಧ…?
ಆದರೆ, ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಮುಖ್ಯಸ್ಥೆ ರಮ್ಯಾ ಸಂಬಂಧ ಕಲ್ಪಿಸಿದ್ದಾರೆ….!
Ravindra Jadeja at 86 was India's second highest scorer. The highest remains petrol at 87. #EngvInd #MehangiPadiModiSarkar
— Divya Spandana/Ramya (@divyaspandana) September 10, 2018
ಹೌದು, ರಮ್ಯಾ ಭಾರತ್ ಬಂದ್ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಅವರ ರನ್ ಪ್ರಸ್ತಾಪಿಸಿರುವ ರಮ್ಯಾ, ‘ ಟೀಂಇಂಡಿಯಾ ಪರ ಎಲ್ಲಾ ಬ್ಯಾಟ್ಸ್ ಮನ್ ಗಳಿಗಿಂತ ರವೀಂದ್ರ ಜಡೇಜಾ 86 ರನ್ ಗಳಿಸಿ ಅಧಿಕ ರನ್ ಗಳಿಸಿದವರಾಗಿದ್ದಾರೆ. ಆದರೂ ಅವರು ಎರಡನೇ ಸ್ಥಾನಕ್ಕೆ ಕುಸಿಯುತ್ತಾರೆ. ಯಾಕಂದರೆ ಭಾರತದ ಪೆಟ್ರೋಲ್ ದರ 87ರನ್ ಇದೆ ಎಂದು ಅವರು ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ.