ಗಂಡ ಮತ್ತು ಮೈದುನನ ಎದುರೇ ಮಹಿಳೆ ಮೇಲೆ ಕಾಮುಕರು ಅತ್ಯಾಚರ ನಡೆಸಿರೋ ಘಟನೆ ಹರಿಯಾಣದ ಗುರ್ ಗಾಂವ್ ನಲ್ಲಿ ನಡೆದಿದೆ.
22ವರ್ಷದ ಮಹಿಳೆ ಹಾಗೂ ಆಕೆಯ ಪತಿ,ಮೈದುನ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದರು. ವಾಪಾಸ್ಸಾಗುವಾಗ ಮೂತ್ರ ವಿಸರ್ಜನೆಗೆಂದು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದರು.
ಈ ವೇಳೆ ಎರಡು ಕಾರುಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಹಿಳೆಯ ಗಂಡ ಮತ್ತು ಮೈದುನನ ಜೊತೆ ಜಗಳ ಮಾಡಿ, ಥಳಿಸಿದ್ದಾರೆ.
ಬಳಿಕ ಕಾರಿನಲ್ಲಿದ್ದ ಮಹಿಳೆಯನ್ನು ಕಾರಿನಿಂದ ಹೊರಕ್ಕೆ ಎಳೆದಿದ್ದಾರೆ. ಅತ್ಯಾಚಾರ ಎಸಗಲು ಮುಂದಾದಾಗ ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಆಗ ಗಂಡ ಮತ್ತು ಮೈದುನ ಮೇಲೆ ಗನ್ ಪಾಯಿಂಟ್ ಇಟ್ಟು ಸುಟ್ಟು ಬಿಡುವುದಾಗಿ ಹೇಳಿ ನಾಲ್ವರೂ ಅತ್ಯಾಚಾರ ಎಸಗಿದ್ದಾರೆ.
ಪತಿ ದುಷ್ಕರ್ಮಿಗಳ ಕಾರ್ ನಂಬರ್ ನೋಡಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
4 held in #Gurugram's sector-56 after they thrashed three members of a family when the family made a stop while returning from a relative's house at night, one of them is also accused of raping a family member. Police say FIR has been registered & probe is underway. #Haryana pic.twitter.com/NtehtyeW1G
— ANI (@ANI) January 22, 2018