ಇಲಿಗಳ ದಾಳಿಗೆ ನವಜಾತ ಶಿಶು ಬಲಿ..!

Date:

ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲರಿಗೂ ಭಯ ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರ ಕೊರತೆ, ಭ್ರಷ್ಟ ಅಧಿಕಾರಿಗಳ ತಾಣಗಳ ಜೊತೆಗೆ ಈಗ ಆಸ್ಪತ್ರೆಗಳಲ್ಲಿ ಇಲಿಗಳ ಕಾಟಗಳೂ ಹೆಚ್ಚಾಗಿವೆ..! ಅವುಗಳಿಗೆ ಆಹಾರ ಯಾವುದು ಗೊತ್ತಾ..? ಈಗ ತಾನೆ ಹುಟ್ಟಿದಂತಹ ನವಜಾತ ಶಿಶುಗಳು..! ಹೌದು.. ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇಲಿಗಳ ದಾಳಿಗೆ ನವಜಾತ ಶಿಶುವೊಂದು ಬಲಿಯಾದ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ಜಮ್ಮುಕಾಶ್ಮೀರದ ಚತ್ರೂ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಗುರುವಾರ ಈ ದುರ್ಘಟನೆ ಸಂಭವಿಸಿದ್ದು, ಗುಲ್ಹಾನ್ ಹಸನ್ ದಂಪತಿಗಳ ನವಜಾತ ಶಿಶುವೊಂದು ಇಲಿಗಳ ದಾಳಿಯಿಂದ ಸಾವನ್ನಪ್ಪಿದೆ.
ಗಂಡು ಮಗುವಿಗೆ ಜನ್ಮ ನೀಡಿದ್ದ ಹಾಸನ್ ಅವರ ಪತ್ನಿಯನ್ನು ಶನಿವಾರ ಹೆರಿಗೆ ವಾರ್ಡ್‍ನಿಂದ ಶಿಫ್ಟ್ ಮಾಡಲಾಗಿತ್ತು. ಮಗುವನ್ನು ನೋಡುವ ತವಕಲ್ಲಿದ್ದ ಹಾಸನ್ ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ತಮ್ಮ ಮಗುವನ್ನು ಇಲಿಗಳ ಹಿಂಡು ಕಚ್ಚಿ ತಿನ್ನುತ್ತಿರುವ ದೃಶ್ಯವನ್ನು ನೋಡಿದ ಆತ ಭಯ ಭೀತರಾನಾಗಿದ್ದಾನೆ.. ರಕ್ತದ ಮಡುವಿನಲ್ಲಿದ್ದ ನವಜಾತ ಶಿಶುವನ್ನು ತಂದೆಯ ಕಣ್ಣೆದುರಿಗೆ ರಾಕ್ಷಸ ಇಲಿಗಳು ಕಚ್ಚಿ ತಿಂದುಹಾಕಿತ್ತು.. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಜಮ್ಮು ಆರೋಗ್ಯ ಸೇವಾ ನಿರ್ದೇಶಕ ಗುರ್‍ಜೀತ್ ಸಿಂಗ್ ಈ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ತಿಳಿಸಿದ್ದಾರೆ. ಆದರೆ ಆಸ್ಪತ್ರೆಯ ಸಿಬ್ಬಂಧಿಗಳು ಮಾತ್ರ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಮಗು ಈ ಮೊದಲೇ ಸತ್ತು ಹೋಗಿತ್ತು.. ಸತ್ತ ಮಗುವಿನ ಮೇಲೆ ಇಲಿಗಳು ದಾಳಿ ನಡೆಸಿವೆ ಎಂದು ಹೇಳಿದ್ದಾರೆ.. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿಯ ಘಟನೆ ನಡೆದದ್ದು ಇದೇ ಮೊದಲಲ್ಲ. ಕೆಲವು ತಿಂಗಳುಗಳ ಹಿಂದೆ ಓರ್ವ ರೋಗಿಯ ಮೇಲೆ ದಾಳಿ ನಡೆಸಿದ್ದ ಇಲಿಗಳು ಆತನ ಕಾಲಿನ ಪಾದಗಳನ್ನು ತಿಂದು ಹಾಕಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವ್ಯಕ್ತಿಯನ್ನು ರಾಜೋರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು.. ಆ ಘಟನೆ ಮಾಸುವ ಮುನ್ನವೇ ಇಂತಹದೊಂದು ಘೋರ ದುರಂತ ಸಂಭವಿಸಿದ್ದು ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯುವುದಾದರೂ ಹೇಗೆ ಎಂಬ ಭಯದಲ್ಲಿ ಅಲ್ಲಿನ ಜನರಿದ್ದಾರೆ.

Like us on Facebook  The New India Times

POPULAR  STORIES :

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...