ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಮಹಿಳೆಯರಿಗೆ ಸಂದೇಶ ನೀಡಿದ್ದಾರೆ.
ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಹಣ-ಚಿನ್ನಾಭರಣದ ಬಗ್ಗೆ ಜಾಗೃತಿ ವಹಿಸಬೇಕು.
ದೇವಸ್ಥಾನಗಳಲ್ಲಿ, ಜನಸಂದಣಿ ಇರುವ ಜಾಗದಲ್ಲಿ ಪಿಕ್ ಪಾಕೆಟ್ ಚೈನ್ ಸ್ನಾಚಿಂಗ್ ಜಾಸ್ತಿಯಾಗುತ್ತೆ. ಅಂತಹ ಜಾಗದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.