ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಅಭಿಪ್ರಾಯವನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿರೋಧಿಸಿದ್ದಾರೆ.
ಭಾರತ ತಂಡ ಇನ್ನೂ 10 ದಿನ ಮೊದಲು ದಕ್ಷಿಣ ಆಫ್ರಿಕಾಕ್ಕೆ ಬಂದು ಅಭ್ಯಾಸ ನಡೆಸಬೇಕಿತ್ತು ಎಂಬ ಶಾಸ್ತ್ರಿ ಅಭಿಪ್ರಾಯವನ್ನು ಕೊಹ್ಲಿ ಅಲ್ಲಗಳೆದಿದ್ದಾರೆ.
ಸತತ ಸೋಲುಗಳ ಬಗ್ಗೆ ಪ್ರತಿಕ್ರಿಯಿಸಿದ್ದ ರವಿಶಾಸ್ತ್ರಿ ಮುಂಚಿತವಾಗಿ ಬಂದು ಅಭ್ಯಾಸ ನಡೆಸಬೇಕಿತ್ತು ಎಂದಿದ್ದರು. ಈ ಬಗ್ಗೆ ಮಾತಾಡಿದ ಕೊಹ್ಲಿ ನಮಗೆ ಅಭ್ಯಾಸ ನಡೆಸಲು 5 ದಿನ ಅವಶ್ಯಕತೆ ಇತ್ತು. ನಾವು ಚೆನ್ನಾಗಿಯೇ ಅಭ್ಯಾಸ ನಡೆಸಿದ್ದೇವೆ. ಸೋಲಿಗೆ ಬೇರೆ ಕಾರಣಗಳನ್ನು ಹುಡುಕಲು ಇಷ್ಟಪಡಲ್ಲ. ಪರಿಸ್ಥಿತಿ ಲಾಭ ಪಡೆಯಲು ನಾವು ವಿಫಲರಾಗಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.