ಭವಿಷ್ಯ ನಿಧಿ, ಪಿಂಚಣಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರ್ ಬಿ ಐ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಂಯುಕ್ತ ವೇದಿಕೆ (ಯುಎಫ್ ಆರ್ ಬಿಐಒಇ) ಸೆ.4 ಮತ್ತು 5ರಂದು ಕರೆಕೊಟ್ಟಿದ್ದ ಮುಷ್ಕರ ಮುಂದೂಡಿದ್ದು, ಇಂದು ಮತ್ತು ನಾಳೆ ಎಂದಿನಂತೆ ಸಾರಾಗವಾಗಿ ವ್ಯವಹಾರಗಳು ನಡೆಯುತ್ತವೆ.
ಬ್ಯಾಂಕ್ ಮ್ಯಾನೇಜ್ಮೆಂಟ್ ಹಾಗೂ ಉದ್ಯೋಗಿಗಳ ಸಂಯುಕ್ತ ವೇದಿಕೆ ಸಭೆ ನಡೆಸಿದ ಬಳಿಕ, ಮುಷ್ಕರವನ್ನು ಮುಂದೂಡಲು ನಿರ್ಧರಿಸಲಾಗಿದೆ. ಮಾತುಕತೆಯ ವೇಳೆ ಬ್ಯಾಂಕ್ ಇನ್ನಷ್ಟು ಕಾಲಾವಕಾಶ ಕೇಳಿದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಆದ್ದರಿಂದ ಸದ್ಯಕ್ಕೆ ಮುಷ್ಕರ ಮುಂದೂಡಿದ್ದಾರೆ.