ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಜೂನಿಯರ್ ಇಂಜಿನಿಯರ್(ಜೆಇ) (ಇಲೆಕ್ಟ್ರಿಕಲ್ ಮತ್ತು ಸಿವಿಲ್) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಆನ್‌ಲೈನ್ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಫೀಶಿಯಲ್ ವೆಬ್‌ಸೈಟ್ http://rbi.ogr.in ಗೆ ಭೇಟಿ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಆರ್‌ಬಿಐ ಜೂನಿಯರ್ ಇಂಜಿನಿಯರ್ 2021 ನೇಮಕಾತಿಗೆ ಸಂಬಂಧಿಸಿದಂತೆ, ವಯೋಮಿತಿ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಿಳಿದು ಅರ್ಜಿ ಸಲ್ಲಿಸಿ.
ಜೂನಿಯರ್ ಇಂಜಿನಿಯರ್ (ಸಿವಿಲ್)24ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್)24
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕಫೆಬ್ರುವರಿ 02, 2021ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕಫೆಬ್ರುವರಿ 15, 2021ಪರೀಕ್ಷಾ ಶುಲ್ಕ ಪಾವತಿಸಲು ಕೊನೆ ದಿನಾಂಕಫೆಬ್ರುವರಿ 15, 2021ಆರ್‌ಬಿಐ ಜೆಇ 2021 ಪರೀಕ್ಷೆ ದಿನಾಂಕ (ನಿರೀಕ್ಷಿತ)ಮಾರ್ಚ್ 8, 2021
ಜೂನಿಯರ್ ಇಂಜಿನಿಯರ್ (ಸಿವಿಲ್) : ಈ ಹುದ್ದೆಗಳಿಗೆ ಡಿಪ್ಲೊಮ ಸಿವಿಲ್ ಇಂಜಿನಿಯರಿಂಗ್ ಅನ್ನು ಶೇಕಡ.65 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ರಿಸರ್ವ್‌ಡ್ ಕೆಟಗರಿ ಅಭ್ಯರ್ಥಿಗಳು ಶೇಕಡ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಅಥವಾ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಶೇಕಡ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡ.45 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್) : ಈ ಹುದ್ದೆಗಳಿಗೆ ಡಿಪ್ಲೊಮ ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಅನ್ನು ಶೇಕಡ.65 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ರಿಸರ್ವ್‌ಡ್ ಕೆಟಗರಿ ಅಭ್ಯರ್ಥಿಗಳು ಶೇಕಡ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಅಥವಾ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಶೇಕಡ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳು ಶೇಕಡ.45 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯ ವಯಸ್ಸು ದಿನಾಂಕ 01-02-2021 ಕ್ಕೆ 20 ವರ್ಷ ದಿಂದ 30 ವರ್ಷದೊಳಗಿರಬೇಕು. ಅಭ್ಯರ್ಥಿಯು ದಿನಾಂಕ 02-02-1991 ಮತ್ತು 01-02-2001 ರ ನಡುವೆ ಜನಿಸಿರಬೇಕು. ವಯೋಮಿತಿ ಸಡಿಲಿಕೆಯು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಇರುತ್ತದೆ.