No menu items!
12.4 C
Munich
Wednesday, April 29, 2026

ಅಣ್ಣಾವ್ರ ಈ ಮಹಾ ಸಾಧನೆಗೆ 45 ವರ್ಷ..

Must read

ಅಣ್ಣಾವ್ರು ಬರೀ ನಟರಲ್ಲ ಅವರೊಂದು ದೊಡ್ಡ ಶಕ್ತಿ.. ಸಿನಿಮಾ ನಟರು ನಟಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಒಬ್ಬ ನಟ ಏನನ್ನು ಬೇಕಾದರೂ ಸಾಧಿಸಬಹುದು ಎಷ್ಟರ ಮಟ್ಟಕ್ಕಾದರೂ ತಲುಪಬಹುದು ಎಂಬುದನ್ನು ಅಣ್ಣಾವ್ರು ಹಲವಾರು ಬಾರಿ ನಿರೂಪಿಸಿದ್ದಾರೆ.

 

 

ನಟನಿಗೆ ಅದುವರೆಗೂ ಸಹ ಡಾಕ್ಟರೇಟ್ ಗೌರವ ಬಂದಿದ್ದೇ ಇಲ್ಲ..! ಬಹುಶಃ ಡಾಕ್ಟರೇಟ್ ಗೌರವವನ್ನು ನಟರಿಗೆ ಕೊಡುವುದಿಲ್ಲವೇನೋ ಎಂದು ಜನ ಆ ವೇಳೆಗೆ ತಿಳಿದುಕೊಂಡಿದ್ದರೇನೋ… ಆದರೆ ವಿಶ್ವದಲ್ಲಿಯೇ ಮೊಟ್ಟಮೊದಲ ಬಾರಿಗೆ ನಟರೊಬ್ಬರು ಗೌರವ ಡಾಕ್ಟರೇಟ್ ಗೆ ಭಾಜನರಾಗುತ್ತಾರೆ. ಹೌದು 1976 ರ ಫೆಬ್ರವರಿ ಎರಡನೇ ತಾರೀಕಿನಂದು ಅಣ್ಣಾವ್ರಿಗೆ  ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ.

 

 

ಅಣ್ಣಾವ್ರಿಗೆ ಈ ಡಾಕ್ಟರೇಟ್ ಬಂದದ್ದು ವಿಶ್ವದಾಖಲೆ ಏಕೆಂದರೆ ವಿಶ್ವ ಚಿತ್ರರಂಗದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಟನೋರ್ವ ಡಾಕ್ಟರೇಟ್ ಗೌರವವನ್ನು ಪಡೆದದ್ದು ಅದೇ ಮೊದಲು. ಈ ಮೂಲಕ ಅಣ್ಣಾವ್ರು ವಿಶ್ವ ದಾಖಲೆಯನ್ನು ಬರೆದಿದ್ದರು. ಅಣ್ಣಾವ್ರು ಮಾಡಿದ ಈ ಮಹಾ ಸಾಧನೆಗೆ ಇಂದು 45 ವರ್ಷಗಳು..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article