ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಂಡಿತಾ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆ ಅಭಿಮಾನಿಗಳಿಗಿತ್ತು. ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು…..ಎಲ್ಲಿ ನೋಡಿದರೂ ಇದೇ ಮಾತು…’ಈ ಸಲ ಕಪ್ ನಮ್ದೆ’ , ‘ಈ ಸಲ ಕಪ್ ನಮ್ದೆ’ .
ಆದರೆ, ಆರ್ ಸಿಬಿ ನಿರೀಕ್ಷಿತ ಪ್ರದರ್ಶನವನ್ನು ನೀಡದೆ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಗೆಲ್ಲ ಬಲ್ಲ ಪಂದ್ಯಗಳನ್ನು ಸಹ ಸೋತು ಪ್ಲೇ ಆಫ್ ನಿಂದ ಬಹುತೇಕ ಔಟ್ ಆಗಿದೆ. ಆರ್ ಸಿಬಿ ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಆದರೆ , ವಾಸ್ತವದಲ್ಲಿ ಆರ್ ಸಿಬಿ ಪ್ಲೇ ಆಫ್ ಗೆ ಹೋಗಲು ಇನ್ನೂ ಅವಕಾಶ ಇದೆ….!

10ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿ ಬಿ 6 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಇದರಿಂದ ಪ್ಲೇ ಆಫ್ ಆಸೆ ಬಿಟ್ಟಂತಾಗಿದೆ ಎಂದು ಕೆಲವರು ನಂಬಿದ್ದಾರೆ.
ಆದರೆ, ಅದೃಷ್ಟ ಮತ್ತು ಗೆಲುವು ಎರಡೂ ಕೈ ಹಿಡಿದರೆ ಆರ್ ಸಬಿ ಪ್ಲೇ ಆಫ್ ಗೆ ಲಗ್ಗೆ ಇಡಲಿದೆ.
ಪ್ಲೇ ಆಫ್ ಗೆ ಹೋಗಲು ಬೇಕಿರೋದು 14 ಅಂಕ. ಆರ್ ಸಿಬಿ ಉಳಿದ 4 ಪಂದ್ಯಗಳನ್ನು ಗೆದ್ದರೆ 8 ಪಾಯಿಂಟ್ ಸಿಗುತ್ತದೆ. ಅಲ್ಲಿಗೆ ಆರ್ ಸಿ ಬಿ ತೆಕ್ಕೆಗೆ 14 ಅಂಕ ಬಂದಂತಾಗುತ್ತದೆ. ಈ ನಾಲ್ಕು ಗೆಲುವು ಪಡೆದರೆ ಪ್ರಯೋಜನವಿಲ್ಲ ನಂತರ ಬೇರೆಯವರ ಗೆಲುವು ಮತ್ತು ಸೋಲಿಗೂ ಕಾಯಬೇಕು…!
ಸನ್ ರೈಸರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಗೆ ಹೋಗೋದು ಖಚಿತ. ಕಿಂಗ್ಸ್ ಇಲೆವೆನ್ ಪಂಜಾಬ್ ಮೂರನೇ ತಂಡವಾಗಿ ಪ್ಲೇ ಆಫ್ ಗೆ ಹೋಗುತ್ತದೆ.

ಇನ್ನು ನಾಲ್ಕನೇ ತಂಡವಾಗಿ ಪ್ಲೇ ಆಫ್ ಗೆ ಹೋಗಲು ಕೋಲ್ಕತ್ತಾ ನೈಟ್ ರೈಡರ್ಸ್, ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪೈಪೋಟಿ ಇದೆ. ಇದರಲ್ಲಿ 10ರಲ್ಲಿ ತಲಾ 5 ಗೆಲುವು-ಸೋಲು ಕಂಡಿರುವ ಕೆಕೆಆರ್ ಗೆ ಹೆಚ್ಚಿನ ಚಾನ್ಸ್ ಇದೆ.
ಆದರೆ ಆರ್ ಸಿ ಬಿ ಹೋಗಬೇಕೆಂದರೆ ಇಂದು ನಡೆಯುವ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮುಂಬೈ ಗೆಲ್ಲಬೇಕು. ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಬೇಕು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೆಕೆಆರ್ ಸೋಲಬೇಕು. ಜೊತೆಗೆ ಆರ್ ಸಿಬಿ ಡೆಲ್ಲಿ, ಪಂಜಾಬ್, ಹೈದರಾಬಾದ್, ಆರ್ ಆರ್ ವಿರುದ್ಧದ ಪಂದ್ಯಗಳನ್ನು ಗೆಲ್ಲಲೇ ಬೇಕು.







