ಚೆನ್ನೈ ಸೂಪರ್ ಕಿಂಗ್ಸ್- ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಪಡೆ ಫೀಲ್ಡಿಗ್ ಆಯ್ದುಕೊಂಡಿದೆ. ಐಪಿಎಲ್ 12ನೇ ಆವೃತ್ತಿಯ ಮೊದಲ ಪಂದ್ಯ ಇಂದು ಚೆನ್ನೈನಲ್ಲಿ ನಡೆಯುತ್ತಿದ್ದು ಹೊಸ ಹುರುಪಿನೊಂದಿಗೆ RCB ತಂಡ ಕಣಕ್ಕಿಳಿದಿದೆ.
ಇನ್ನು ಆರ್ಸಿಬಿ ಪರ ಆಡುವ 11 ರ ಬಳಗದಲ್ಲಿ ಪಾರ್ಥಿವ್ ಪಟೇಲ್ (ವಿ.ಕೀ), ವಿರಾಟ್ ಕೊಹ್ಲಿ (ಸಿ), ಮೊಯೆನ್ ಅಲಿ, ಎಬಿ ಡಿ ವಿಲಿಯರ್ಸ್, ಶಿಮ್ರಾನ್ ಹೆಟ್ಮರ್, ಶಿವಮ್ ದುಬೆ, ಕೋಲಿನ್ ಡಿ ಗ್ರಾಂಡ್ಹೋಮ್ಮೆ, ಉಮೇಶ್ ಯಾದವ್, ಯುಜ್ವೆಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವ್ದೀಪ್ ಸೈನಿ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಸಿಎಸ್ಕೆ ಪರ ಆಡುವ 11 ರ ಬಳಗದಲ್ಲಿ ಅಂಬಟಿ ರಾಯುಡು, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಎಂಎಸ್ ಧೋನಿ (ಸಿ/ವಿ.ಕೀ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಹಾರ್, ಶರ್ದೂಲ್ ಠಾಕೂರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ, RCB ಪರ ಆರಂಬಿಕರಾಗಿ ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ಆಟವನ್ನು ಆರಂಭಿಸಿದ್ದಾರೆ.