RCB ವಿರುದ್ಧದ ಸೋಲಿಗೆ ಖಾರವಾಗಿ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ

Date:

ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಅನುಭವಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ನಾಯಕ ರೋಹಿತ್‌ ಶರ್ಮಾ ಟೂರ್ನಿ ಗೆಲ್ಲುವುದು ಮುಖ್ಯವೇ ಹೊರತು ಮೊದಲನೇ ಪಂದ್ಯವಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 159 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಶರ್ಮಾ, “ಟೂರ್ನಿಯ ಮೊದಲನೇ ಪಂದ್ಯ ಗೆಲ್ಲುವುದು ಮುಖ್ಯವಲ್ಲ, ಆದರೆ, ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ಷಿಪ್‌ ಆಗುವುದು ತುಂಬಾ ಮುಖ್ಯ ಎಂದು ಭಾವಿಸುತ್ತೇನೆ. ನಾವು ಕಠಿಣ ಪೈಪೋಟಿ ನೀಡಿದ್ದೇವೆ ಹಾಗೂ ಸುಲಭವಾಗಿ ಎದುರಾಳಿ ತಂಡವನ್ನು ಗೆಲ್ಲಲು ಬಿಡಲಿಲ್ಲ. ಆದರೆ, ಗಳಿಸಿದ್ದ ರನ್‌ಗಳಲ್ಲಿ ನಮಗೆ ತೃಪ್ತಿ ಇಲ್ಲ. ಇನ್ನೂ 20 ರನ್‌ ನಾವು ಕಡಿಮೆ ಗಳಿಸಿದ್ದೇವೆ,” ಎಂದರು.

“ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೆವು. ಈ ಕಾರಣದಿಂದ ನಮಗೆ ಸ್ವಲ್ಪ ಹಿನ್ನಡೆಯಾಯಿತು. ಇದನ್ನು ಮರೆತು ಮುಂದೆ ಸಾಗುವ ಅಗತ್ಯವಿದೆ. ಇನ್ನು ಕೊನೆಯ ನಾಲ್ಕು ಓವರ್‌ಗಳು ಬಾಕಿ ಇದ್ದಾಗ ಕ್ರೀಸ್‌ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಡೇನಿಯಲ್‌ ಕ್ರಿಸ್ಟಿಯನ್‌ ಇದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಔಟ್‌ ಮಾಡಲು ಬುಮ್ರಾ ಹಾಗೂ ಬೌಲ್ಟ್ ಅವರ ಮೊರೆ ಹೋಗಬೇಕಾಯಿತು,” ಎಂದು ಹೇಳಿದರು.

“ಖಚಿತವಾಗಿ ಇಲ್ಲಿನ ಪಿಚ್ ಬ್ಯಾಟಿಂಗ್‌ ಮಾಡಲು ಸುಲಭವಾಗಿರಲಿಲ್ಲ. ಆದರೆ, ಎಬಿ ಡಿವಿಲಿಯರ್ಸ್ ನಿಜಕ್ಕೂ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದರು. ಗುಂಪಾಗಿ ನಾವು ಜಾಸ್ತಿ ಸಮಯ ಕಳೆಯಲಿಲ್ಲ. ಒಂದು ತಿಂಗಳು ಮೊದಲೇ ಪೂರ್ವ ತಯಾರಿ ನಡೆಸಿದ್ದ ದುಬೈಗಿಂತ ಇಲ್ಲಿನ ಪರಿಸ್ಥಿತಿ ತುಂಬಾ ವಿರುದ್ಧವಾಗಿದೆ,” ಎಂದು ರೋಹಿತ್ ತಿಳಿಸಿದರು.

“ಕಳೆದ ಹಲವು ವರ್ಷಗಳಲ್ಲಿ ಆಡಿದಂತೆ ಆದಷ್ಟು ಬೇಗ ನೀವು ಆಟದಲ್ಲಿ ಹೊಂದಾಣಿಕೆ ಸಾಧಿಸಬೇಕಾಗಿದೆ. ತವರು ನೆಲದಲ್ಲಿ ಅತ್ಯುತ್ತದ ದಾಖಲೆ ಹೊಂದಿರುವುದರಿಂದ ತಂಡಗಳಿಗೆ ಇದು ಕಠಿಣವಾಗಲಿದೆ. ಆದರೆ, ಇದು ಕ್ರೀಡೆಯಾಗಿದ್ದರಿಂದ ನೀವು ಮುಂದೆ ನುಗ್ಗಿ ಪಂದ್ಯ ಗೆಲ್ಲಬೇಕಾಗುತ್ತದೆ. ನಾವು ಅಂಗಳದಲ್ಲಿದ್ದೇವೆ ಎಂಬುದು ಅದೃಷ್ಟ,” ಎಂದು ಹೇಳಿದರು.

ವಿರಾಟ್‌ ಕೊಹ್ಲಿ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ ವಿಕೆಟ್ ಒಪ್ಪಿಸಿದ ಬಳಕ ತಂಡದ ಜವಾಬ್ದಾರಿ ಹೊತ್ತ ಎಬಿ ಡಿವಿಲಿಯರ್ಸ್ ಅದ್ಭುತ ಬ್ಯಾಟಿಂಗ್‌ ಮಾಡಿದರು. ಅವರು ಆಡಿದ 27 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 48 ರನ್‌ ಗಳಿಸಿ ತಂಡವನ್ನು ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಎಬಿಡಿ, “ಕ್ರಿಕೆಟ್‌ನ‌ ಅಸಾಧಾರಣ ಪಂದ್ಯ ಇದಾಗಿದೆ. ವಿಶೇಷವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಇದೇ ರೀತಿಯಾಗಿ ಪಂದ್ಯ ಕೂಡಿರುತ್ತದೆ. ಈ ಪಂದ್ಯದಲ್ಲಿ ಗೆಲ್ಲುವುದು ಸುಲಭವಲ್ಲ ಎಂಬುದು ನಮಗೆ ತಿಳಿದಿತ್ತು. ಇಂತಹ ಪಿಚ್‌ಗಳಲ್ಲಿ ಬ್ಯಾಟಿಂಗ್‌ ಮಾಡುವುದು ಕಷ್ಟ. ಇದರ ನಡುವೆಯೂ ನಮ್ಮ ಪರ ಫಲಿತಾಂಶ ಮೂಡಿಬಂದಿರುವುದು ಸಂತಸ ತಂದಿದೆ,” ಎಂದು ತಿಳಿಸಿದರು.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...