ಐಪಿಎಲ್ ಹತ್ತಿರ ಬರುತ್ತಿದ್ದಂತೆ ಹಲವಾರು ತಂಡಗಳು ತಮ್ಮ ಜೆರ್ಸಿಯನ್ನು ಬದಲಾಯಿಸಿಕೊಂಡಿವೆ. ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ತಂಡ ತನ್ನ ಜೆರ್ಸಿಯನ್ನು ಬದಲಾಯಿಸಿಕೊಂಡಿತು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಾ ತನ್ನ ಜೆರ್ಸಿಯನ್ನು ಬದಲಾಯಿಸಿಕೊಳ್ಳುತ್ತಿದೆ.
ಬೆಂಗಳೂರು ತಂಡ ತನ್ನ ಜೆರ್ಸಿಯನ್ನು ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಜೆರ್ಸಿಯ ಫೋಟೋಗಳು ವೈರಲ್ ಆಗಿವೆ. ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟ್ವೀಟ್ ವೊಂದರಲ್ಲಿ ಹೊಸ ಜೆರ್ಸಿ ಇರುವ ಫೋಟೋವನ್ನು ಹಾಕಿಕೊಂಡಿದ್ದಾರೆ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಅಧಿಕೃತವಾಗಿ ಇದೆ ಹೊಸ ಆಚರಿಸಿ ಎಂದು ಘೋಷಣೆ ಮಾಡಿಲ್ಲ.