ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!

Date:

ನಟ ಸೂರ್ಯ ಹಾಗೆ ಅಮೀರ್ ಖಾನ್ ಅಭಿನಯದ ಸೈಕಲಾಜಿಕಲ್ ಥ್ರಿಲ್ಲರ್ ಗಜಿನಿ ಚಿತ್ರವನ್ನ ನೋಡಿದ್ದಿರಾ..? ಆ ಸಿನಿಮಾದಲ್ಲಿ ಕೆಲ ನಿಮಿಷಗಳಲ್ಲಿ ತನ್ನ ನೆನಪಿನ ಶಕ್ತಿಯನ್ನ ಕಳೆದುಕೊಳ್ತಿರ್ತಾನೆ ಹೀರೊ.. ಇದನ್ನ ರೀಲ್ ನಲ್ಲಿ ನೋಡಿ ಖುಷಿ ಪಟ್ಟು ಸೂಪರ್ ಮೂವೀ ಅಂತ ಚಿತ್ರತಂಡಕ್ಕೆ ಶಭಾಷ್ ಗಿರಿ ಕೂಡ ಕೊಟ್ಟಿರ್ತೀರ… ಆದ್ರೆ ನಿಜ ಜೀವನದಲ್ಲಿ ಗಜನಿ ಕಥೆಯನ್ನ ಹೋಲುವ ವ್ಯಕ್ತಿ ಇದ್ದಾನೆ ಅಂದ್ರೆ ನೀವು ನಂಬ್ತೀರಾ…? ನಂಬ್ಲೇಬೇಕು.!! ಹೌದು ಈತನೆ ಆ ಗಜನಿ.. ಹೆಸರು ಚೆನ್ ಹೊಂಗ್ಜಿ ಅಂತ.. ಪ್ರತಿದಿನ ಹಾಸಿಗೆಯಿಂದ ಎದ್ದಾಗಲು ತಾನಿನ್ನೂ 17 ವರ್ಷದವನೆಂದು ಭಾವಿಸ್ತಾನೆ.. ಇದಕ್ಕೆ ಕಾರಣ 8 ವರ್ಷಗಳ ಹಿಂದೆ ಅಂದ್ರೆ ಈತ 17 ವರ್ಷದವನಿದ್ದಾಗ ಬೈಕ್ ಆಕ್ಸಿಡೆಂಟ್ ನಲ್ಲಿ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿತ್ತು.. ಅಂದಿನಿಂದ ಎಲ್ಲವನ್ನೂ ಎಲ್ಲರನ್ನೂ ಮರೆತುಹೋಗುವ ಸಮಸ್ಯೆ ಶುರುವಾಗಿದೆ.. ಆದ್ರೆ ತನಗೆ ಆಗಿರೋ ಅಪಘಾತದ ಬಗ್ಗೆಯಾಗಲಿ ಅಥವಾ 5 ರಿಂದ 10 ನಿಮಿಷದ ಹಿಂದೆ ಏನಾಗಿದೆ ಅನ್ನೋದಾಗಲಿ ಚೆನ್ಗೆ ನೆನಪಿನಲ್ಲಿ ಉಳಿಯೋದಿಲ್ಲ.. ಹಾಗಿದ್ರೆ ನೆನಪಿನಲ್ಲಿ ಉಳಿಸಿಕೊಳ್ಳೋಕೆ ಏನು ಮಾಡ್ತಾನೆ ಅನ್ನೋ ಕುತೂಹಲ ನಿಮ್ಮಲ್ಲಿ ಇದ್ರೆ ಅದಕ್ಕಾಗಿ ಒಂದು ಡೈರಿಯನ್ನ ತನ್ನ ಬಳಿ ಇಟ್ಟುಕೊಂಡಿದ್ದಾನೆ.. ತಾನು ನೋಡಿರುವುದನ್ನ, ಭೇಟಿ ಮಾಡಿದವರನ್ನ ಹಾಗೆ ತಾನು ಪ್ಲಾಸ್ಟಿಕ್ ಬಾಟಲ್ ನ ಮಾರಿ ಬಂದ ಹಣವನ್ನ ಎಲ್ಲವನ್ನೂ ಈ ಡೈರಿಯಲ್ಲಿ ಬರೆದಿಟ್ಟುಕೊಳ್ತಾನೆ…
ಜೊತೆಗೆ ಅದನ್ನ ಧ್ವನಿ ನಿರೂಪಕವಾಗಿ ಶೇಖರಿಸಿಕೊಳ್ಳೋದ್ರಿಂದ ತಾನೇನು ಬರೆದಿದ್ದೇನೆ ಅನ್ನೋದನ್ನ ಕೇಳಿ ಅರ್ಥ ಮಾಡಿಕೊಳ್ತಾನೆ.. ಆದ್ರೆ ತನ್ನ ಜೀವನದಲ್ಲಿ ನಡೆದ ಅದೊಂದು ಘಟನೆ ಮಾತ್ರ ಈತನ ಜೀವನದ ದಿಕ್ಕನ್ನೆ ಬದಲಿಸಿದ್ದು ಮಾತ್ರ ಸುಳ್ಳಲ್ಲ.. ಸ್ವತಃ ಆತನ ಜೀವನವೆ ಆತನಿಗೆ ಕಬ್ಬಿಣದ ಕಡಲೆಯಾಗಿದೆ.. ಯಾಕಂದ್ರೆ ತನ್ನನ್ನೆ ತಾನು ಪ್ರತಿದಿನ ತನಗೆ ಪರಿಚಯ ಮಾಡಿಕೊಳ್ಳಬೇಕಿದೆ.. ಆಕ್ಸಿಡೆಂಟ್ ಆದ ಬಳಿಕ ತನ್ನ 8 ವರ್ಷದ ಜೀವನ ಹೇಗೆ ಕಳೆಯಿತ್ತು ಅನ್ನೋದೆ ಈತನಿಗೆ ನೆನಪಿಲ್ಲ.. ಇನ್ನೂ ವಿದ್ಯಾಭ್ಯಾಸ ಹೇಗ್ ಹೇಳಿ..? ಒಟ್ಟಿನಲ್ಲಿ ತನಗಿರೋ ಈ ಸಮಸ್ಯೆಯಿಂದ ಮೂಲೆ ಸೇರದೆ ತನ್ನ ಕಾಲ ಮೇಲೆ ನಿಂತಿರೋ ಈತ ಎಲ್ಲ ಇದ್ದು ಏನು ಮಾಡದವರಿಗಿಂತ ನೂರಾರು ಪಟ್ಟು ಮೇಲು… ಏನಂತ್ತೀರಾ..?

https://www.youtube.com/watch?v=fnaSuZKFgGI

  • ಅಶೋಕ್ ರಾಜ್

POPULAR  STORIES :

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...