ಅವರಿಬ್ಬರು 8 ವರ್ಷ ಇದ್ದಾಗಿನಿಂದ ಪರಸ್ಪರ ಪ್ರೀತಿಸ್ತಾ ಇದ್ರು. ಪ್ರೀತಿ ಜಯಿಸಿ 1940ರಲ್ಲಿ ಮದುವೆಯೂ ಆದ್ರೂ. ಯಾವತ್ತೂ ಕಿತ್ತಾಡದೇ ಪ್ರೀತಿಸಿಕೊಂಡೇ 75 ವರ್ಷ ಸಂಸಾರ ನಡೆಸಿದ್ರು. ಒಂದೇ ದಿನ, ಕೇವಲ ಒಂದೇ ಗಂಟೆ ಅಂತರದಲ್ಲಿ ಅಪ್ಪಿಕೊಂಡೇ ಪ್ರಾಣ ಬಿಟ್ರು..! ಇದು ಜಗತ್ತು ಕಂಡ ಅಪ್ರತಿಮ ಜೋಡಿಗಳ ರಿಯಲ್ ಲವ್ ಸ್ಟೋರಿ..!
ಅಮೆರಿಕಾದ ಕ್ಯಾಲಿಫೋರ್ನಿಯಾದ ಈ ಜೋಡಿಯ ಕೊನೆಯ ಆಸೆಯೂ ಇಬ್ಬರೂ ಒಟ್ಟಿಗೆ ಸಾಯಬೇಕು ಅನ್ನೋದಾಗಿತ್ತಂತೆ. ಇಬ್ಬರಿಗೂ ತುಂಬಾ ದಿನದಿಂದ ಆರೋಗ್ಯ ಹದಗೆಟ್ಟಿತ್ತು. ಅಜ್ಜಿಗೆ 96 ವರ್ಷ, ಅಜ್ಜನಿಗೆ 95. ಅಜ್ಜಿಯ ಹೆಸರು ಜೆನೆಟ್ ಟೋಕೋ, ಅಜ್ಜ ಅಲೆಕ್ಸಾಂಡರ್ ಟೋಕೋ. ಚಿಕ್ಕವರಿದ್ದಾಗಿನಿಂದ ಅವರದ್ದು ಸಖತ್ ಲವ್. ಆ ಲವ್ ಯಾವತ್ತೂ ಕಡಿಮೆಯಾಗಲೇ ಇಲ್ಲ. ಅವರ ಮಕ್ಕಳು ಮೊಮ್ಮಕ್ಕಳ ಬಳಿ ಯಾವಾಗ್ಲೂ ಹೇಳೋರಂತೆ, ನಮ್ಮಿಬ್ಬರ ಕೊನೆಯ ಆಸೆ ಒಟ್ಟಿಗೇ ಪ್ರಾಣ ಬಿಡಬೇಕು ಅನ್ನೋದು ಅಂತ. ಕೊನೆ ಆ ಆಸೆಯೂ ಈಡೇರಿಬಿಡ್ತು.
2015 ಜುಲೈ 2ನೇ ತಾರೀಕು ರಾತ್ರಿ 10 ಗಂಟೆಯ ಹೊತ್ತಿಗೆ ಅಜ್ಜನ ಪ್ರಾಣ ಪಕ್ಷಿ ಹಾರಿಹೋಯ್ತು. ಮಗಳು ಬಂದು ಅಜ್ಜಿಗೆ ಈ ವಿಷಯ ಹೇಳಿದ ಕೂಡ್ಲೇ ಅಜ್ಜಿ ನೇರವಾಗಿ ಅಜ್ಜ ಮಲಗಿದ್ದ ಹಾಸಿಗೆಯಲ್ಲಿ ಅವರ ಪಕ್ಕದಲ್ಲೇ ಮಲಗಿ ಅಜ್ಜನ ಕೈಯನ್ನು ತನ್ನ ಮೇಲೆ ಹಾಕಿಕೊಂಡು `ನನ್ನನ್ನು ಬಿಟ್ಟು ಹೋದೆಯಾ..? ನಾನೂ ಬಂದೆ ಕಾಯ್ತಾ ಇರು’ ಅಂತ ಕಣ್ಣು ಮುಚ್ಚಿದವರು ಮತ್ತೆ ಏಳಲೇ ಇಲ್ಲ. ಅವರಿಬ್ಬರು ಸತ್ತರೂ ಪ್ರೀತಿ ಸಾಯಲಿಲ್ಲ.
POPULAR STORIES :
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
ಗಾಳಿ ಬರಲಿ ಅಂತ ವಿಮಾನದ ಕಿಟಕಿ ತೆಗೆದ…!
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!