ಕಿಂಗ್ ಆಫ್ ಬ್ಯಾಡ್ ಟೈಮ್ಸ್..!

0
68

ಹೆಂಡ ಕುಡಿದವರು ಹಾಳಾಗೋಗ್ತಾರೆ ಅಂತಾರೆ. ಆದರೆ ಕುಡಿಸಿದವರೂ ಕೂಡ ಕೆಲವೊಮ್ಮೆ ಎಕ್ಕುಟ್ಟೋಗ್ತಾರೆ ಅಂತ ಪ್ರೂವ್ ಆಯ್ತು. ಯಾರ ಬಗ್ಗೆ ಮಾತಾಡ್ತಿದ್ದೀನಿ ಅಂತಾ ಗೊತ್ತಾಗಲಿಲ್ವಾ ಇನ್ನೂ? ಅದೇ ಕಾಸ್ಟ್ಲೀ ಕಾರು, ಸುತ್ತಾ ಹುಡುಗೀರು, ಕೈಯಲ್ಲಿ ಕಿಂಗ್‍ಫಿಷರ್ ಬೀರು..! ಎಸ್ ಅವರೇ, ಸದ್ಯಕ್ಕೆ ಬ್ಯಾಡ್ ಟೈಮಿನಲ್ಲಿರೋ ಕಿಂಗ್ ಆಫ್ ಗುಡ್ ಟೈಮ್ಸ್. ದಿ ಗ್ರೇಟ್ ವಿಜಯ್ ಮಲ್ಯ.

ಏಳು ಸಾವಿರ ಕೋಟಿ, ಅಬ್ಬೋ..! ಎಷ್ಟು ಸೊನ್ನೆ ಇದೆ ಅಂತಾನೆ ಕನ್‍ಪ್ಯೂಸ್ ಆಗೋ ಅಷ್ಟು ದುಡ್ಡು. ಅಷ್ಟೊಂದು ದುಡ್ಡು ಸಾಲ ಮಾಡಿ ಕ್ಯಾಚ್ ಮಿ ಇಫ್ ಯೂ ಕ್ಯಾನ್ ಸಿನಿಮಾದಲ್ಲಿ ಡಿಕ್ಯಾಪ್ರಿಯೋ ಹೋಗೋ ಥರಾ ದೇಶ ಬಿಟ್ಟು ಸೀದಾ ಲಂಡನ್ನಿಗೆ ಹೋಗ್ಬಿಡೋದಾ? ಈಗ ಬ್ಯಾಂಕ್‍ಗಳು ಲಬೋ ಅಂತಾ ಬಾಯ್ ಬಡ್ಕೊತಿವೆ. ಒಂದಲ್ಲ ಎರಡಲ್ಲ, ಹದಿನೇಳು ಬ್ಯಾಂಕ್‍ಗಳು. ಕೊಟ್ಟೋನ್ ಕೋಡಂಗಿ ಇಸ್ಕಂಡೋನ್ ಈರಭದ್ರ ಅಂತಾರಲ್ಲ ಹಂಗಾಯ್ತು ಕಥೆ. ಈ ಕೋಡಂಗಿ ಫೆಲೋಸ್ ಬ್ಯಾಂಕ್ ಪೀಪಲ್ ನಾವು ಬರೀ ಆರೇಳು ಸಾವಿರದ ಈ.ಎಮ್.ಐ ಕಟ್ಟೋದು ಸ್ವಲ್ಪ ಲೇಟ್ ಆಗ್ತಿದ್ದಂಗೆ ದಿನಕ್ಕೆ ಇಪ್ಪತ್ತು ಸಲ ಕಾಲ್ ಮಾಡಿ ಪ್ರಾಣ ತಿಂತಾರೆ. ಅಂತದ್ರಲ್ಲಿ ಅದೆಂಗೆ ಇಷ್ಟ್ ದಿನ ಮಲ್ಯ ಸಾಹೇಬರನ್ನ ಸುಮ್ನೆ ಬಿಟ್ಟಿದ್ರೊ ದೇವರಿಗೆ ಗೊತ್ತು.

ನಾವು ಅಂದರೆ ಶ್ರೀಸಾಮಾನ್ಯರು ಮನೆ ಕಟ್ಕೊಳಕ್ಕೋ, ಕಾರ್ ತಗೊಳೋಕ್ಕೋ ಅಥವಾ ಎಜುಕೇಷನ್‍ಗೋ ಒಂದೆರಡು ಲಕ್ಷ ಸಾಲ ಕೇಳೋಕ್ಕೋದ್ರೆ ಶ್ಯೂರಿಟಿ ಸೆಕ್ಯುರಿಟಿ ಅದು ಇದು ಅಂತಾ ಅವ್ರಪ್ಪನ ಮನೆ ದುಡ್ಡು ನಮಗೆ ಕೊಡ್ತಿದ್ದಾರೆ ಅನ್ನೋ ಹಂಗೆ ಆಡ್ತಾರೆ ಬ್ಯಾಂಕಿನಲಿ. ಬಟ್ ಅದ್ಯಾವ ನಂಬಿಕೆ ಮೇಲೆ ಮಲ್ಯನಿಗೆ ಕೋಟಿಗಟ್ಟಲೆ ದುಡ್ಡು ಕೊಟ್ರು? ಒಂದು ಬಾರಿ ಕೊಟ್ಟು ಕಿಂಗ್‍ಫಿಷರ್ ಏರ್‍ಲೈನ್ಸ್ ಮಕಾಡೆ ಮಲ್ಕೊಂಡಿದ್ದು ಗೊತ್ತಿದ್ರು ಮತ್ತೆ ಕಿಂಗ್‍ಫಿಷರ್‍ಗೆ ರೆಕ್ಕೆ ಕಟ್ಟೋ ದರ್ದು ಏನಿತ್ತು ಇವರಿಗೆ? ಬೀರಲ್ಲಿ ಬಂದಂಗೆ ಏರಲ್ಲೂ ದುಡ್ಡು ಬರತ್ತೆ ಅನ್ನೋ ಗ್ಯಾರಂಟಿನಾ? ಮಲ್ಯಂಗೆ ಟೈಮ್ ಚನ್ನಾಗಿರಲಿಲ್ಲ. ಕಿಂಗ್‍ಫಿಷರ್ ಹಾರಸೋಕ್ ಆಗಲಿಲ್ಲ. ಅದಕ್ಕೆ ಇವರಿಗೆಲ್ಲ ಕಾಗೆ ಹಾರಿಸಿ ಹೋಗಿಬಿಟ್ಟರು..!

ಮಲ್ಯ ಹೀಗೆ ಲಗೇಜೆಲ್ಲಾ ತುಂಬ್ಕೊಂಡು ಲಂಡನ್ನಿಗೆ ಹೋಗಿದ್ದು ಗೊತ್ತಾಗ್ತಿದ್ದಂಗೆ ಬ್ಯಾಂಕೋರಿಗೆ ಪುಕಪುಕ ಅಂದಿರಬೇಕು. ಟ್ರೈನ್ ಹೋದಮೇಲೆ ಟಿಕೆಟ್ ತಗೊಂಡಂಗೆ ಈಗ ಅವರ ಪಾಸ್‍ಪೋರ್ಟ್ ಸೀಜ್ ಮಾಡಿ ಅಂತಾ ಕೋರ್ಟಿಗೆ ಹೋಗಿದ್ದಾರೆ. ಅದು ಹಾಳಾಗಿ ಹೋಗಲಿ ಅವರನ್ನ ಭಾರತಕ್ಕೆ ವಾಪಸ್ ಕರೆದುಕೊಂಡು ಬರುವುದರ ಬಗ್ಗೆ ಯೋಚನೆ ಮಾಡೋದು ಬಿಟ್ಟು ಈ ಗವರ್ಮೆಂಟ್‍ನವರು ಕಿತ್ತಾಡಿಕೊಂಡು ಸಾಯ್ತಿದ್ದಾರೆ. ಸಾಲ ಕೊಟ್ಟಿದ್ದು ನೀವೇ ಅಂತಾ ರೂಲಿಂಗ್ ಪಾರ್ಟಿಯವರು, ಅವರನ್ನ ಎಸ್ಕೇಪ್ ಆಗೋಕೆ ಬಿಟ್ಟಿದ್ದು ನೀವೇ ಅಂತ ಆಪೋಸಿಷನ್‍ನವರು. ಅದಕ್ಕಿಂತಾ ಮಜಾ ಅಂದ್ರೆ ಗ್ಯಾಪಲ್ಲಿ ದೇವೇಗೌಡರು ಮಲ್ಯ ಕರ್ನಾಟಕದ ಮಣ್ಣಿನ ಮಗ ಅಂದುಬಿಟ್ರಂತೆ.

ಸದ್ಯಕ್ಕೆ ಲಂಡನ್ನಿನಲ್ಲಿ ಬಿಂದಾಸ್ ಆಗಿ ಬಿಯರ್ ಕುಡ್ಕೊಂಡ್ ಇದಾರಂತೆ ಬಾಸ್. ನಾನು ಓಡೋಗಿಲ್ಲ ಮತ್ತೆ ಬರ್ತಿನಿ ಅಂತ ಹೇಳಿಕೊಂಡಿದ್ದಾರಂತೆ. ಅವರು ಮತ್ತೆ ವಾಪಸ್ ಭಾರತಕ್ಕೆ ಬರ್ತಾರಾ? ಕಿಂಗ್ ಆಫ್ ಗುಡ್ ಟೈಮ್ಸ್‍ಗೆ ಒಳ್ಳೆ ಕಾಲ ಬರುತ್ತಾ? ಕಿಂಗ್‍ಫಿಷರ್ ಮತ್ತೆ ಫಿನಿಕ್ಸ್‍ನಂತೆ ಎದ್ದು ಬರತ್ತಾ ಕಾದು ನೋಡಬೇಕು.

  • ತ್ರಿಲೋಕ್ ತ್ರಿವಿಕ್ರಮ

POPULAR  STORIES :

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here