ಥಿಯೇಟರ್ ಗಳಲ್ಲಿ ಹೀರೋಗಳ ಡೈಲಾಗ್ ಗಳಿಗೆ ಜನರು ಶಿಳ್ಳೆ ಹೊಡೆಯುವುದು ಸಾಮಾನ್ಯ. ಏಕೆಂದರೆ ತೆರೆ ಮೇಲೆ ಅವರು ನಿಜಕ್ಕೂ ಸ್ಟಾರ್ ಗಳಾಗಿರುತ್ತಾರೆ. ಆದರೆ ತೆರೆ ಮೇಲಿನ ಸ್ಟಾರ್ ಗಳೆಲ್ಲರೂ ರಿಯಲ್ ಲೈಫ್ ನಲ್ಲಿ ಹೀರೋ ಆಗಲು ಸಾಧ್ಯವಿಲ್ಲ. ಆದರೆ ಕೆಲವರು ಮಾತ್ರ ಆ ಮಾತಿಗೆ ಅಪವಾದ..! ಅಂಥ ಸೂಪರ್ ಸ್ಟಾರ್ ಗಳು ಯಾರು ಅಂತೀರಾ ಈ ಸ್ಟೋರಿ ನೋಡಿ.
ಅಕ್ಷಯ್ ಕುಮಾರ್
ಬಾಲಿವುಡ್ ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ನಟ. ಈತ ತನ್ನ ಸೂಪರ್ ಹಿಟ್ ಚಿತ್ರ ಬೇಬಿಯಲ್ಲಿ ಬಂದ ಲಾಭದ 50% ಹಣವನ್ನು ಸೇನೆಗೆ ನೀಡಿ ತಮ್ಮ ಔದಾರ್ಯ ಮೆರೆದರು.
ಬ್ರೆಂಡನ್ ಮೆಕ್ಕಲಂ
ನ್ಯೂಜಿಲೆಂಡ್ ಕಂಡ ಅತ್ಯಂತ ಯಶಸ್ವಿ ಕ್ಯಾಪ್ಟನ್ ಕಮ್ ಆಟಗಾರ ಬ್ರೆಂಡನ್ ಮೆಕ್ಕಲಂ. ಈತ ತನ್ನ ದೇಶದ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಸದಾ ದುಡಿಯುತ್ತಲೇ ಇರುತ್ತಾರೆ. ತಾನು ದುಡಿಯುವ ಪ್ರತಿ ನೂರು ರೂಪಾಯಿಯಲ್ಲಿ ಕೇವಲ 7 ರೂಪಾಯಿಯನ್ನು ತನ್ನ ಬಳಿ ಇಟ್ಟುಕೊಂಡು ಉಳಿದದ್ದನ್ನು ದಾನ ಮಾಡುತ್ತಾರೆ.
ಜಾನ್ ಸೀನಾ
ರಿಂಗ್ ನಲ್ಲಿ ವೈರಿಗಳ ಪಾಳಿಗೆ ದುಸ್ವಪ್ನವಾಗಿ ಕಾಡುವ ಜಾನ್ ಸೀನಾ, ರಿಂಗ್ ನಿಂದ ಹೊರಬಂದರೆ ಸಾಕು ಬಡವರಿಗಾಗಿ, ಕ್ಯಾನ್ಸರ್ ಪೀಡಿತರಿಗಾಗಿಯೇ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಅಲ್ಲದೇ ಇಲ್ಲಿಯವರೆಗೆ ನೂರಾರು ಮಕ್ಕಳಿಗೆ ವಿವಿಧ ರೀತಿಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿರುವ ಸೀನಾ, ಅವರಿಗೆ ಹೊಸಬದುಕು ನೀಡಿದ್ದಾರೆ.
ನಟ ಸೂರ್ಯ
ಭಾರತ ಕಂಡ ಅತ್ಯುತ್ತಮ ನಟರಲ್ಲಿ ಸೂರ್ಯ ಕೂಡಾ ಒಬ್ಬರು. ಇವರು ಸಿಂಗಂ, ಗಜಿನಿ, ರಕ್ತ ಚರಿತ್ರ, ಕಾಕಾ ಕಾಕಾ ಮುಂತಾದ ಚಿತ್ರಗಳ ಮೂಲಕ ಗುರುತಿಸಿಕೊಂಡವರು ಅವರು. ಸಿನಿಮಾ ಬಿಟ್ಟರೆ ಹಣಕಾಸಿನ ತೊಂದರೆ ಎದುರಿಸುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕಾರ್ಯದಲ್ಲೂ ಅವರು ನಿರತರಾಗಿದ್ದಾರೆ. ಅಲ್ಲದೇ ಇದಕ್ಕಾಗಿ `ಅಗರಂ’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.
ದುನಿಯಾ ವಿಜಿ
ದುನಿಯಾ ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಬೆಳಕಿಗೆ ಬಂದ ದುನಿಯಾ ವಿಜಿ ತನ್ನ ಅಭಿಮಾನಿಗಳಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ಇತ್ತೀಚೆಗೆ ತನ್ನ ಅಭಿಮಾನಿಯೋರ್ವ ಸಾವನ್ನಪ್ಪಿದಾಗ ಆತನ ಶವವನ್ನು ಸ್ವತಃ ಹೊತ್ತೊಯ್ಯುವ ಮೂಲಕ ಗಮನ ಸೆಳೆದರು. ಅಲ್ಲದೇ ಆ ಕುಟುಂಬಕ್ಕೆ ತಮ್ಮಿಂದಾದ ಸಹಾಯ ಮಾಡುವ ಮೂಲಕ ಮಾದರಿಯಾದರು.
- ರಾಜಶೇಖರ ಜೆ