ನನ್ನ ಕಥೆ : ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು.
ಫೆಬ್ರುವರಿ ೮ ೨೦೧೩,ನಾನು ಸಾಕೆತ್ ಮೆಟ್ರೊ ನಿಲ್ದಾಣದಲ್ಲಿದ್ದೆ, ಇನ್ನೇನು ರೈಲು ಹಳಿಗೆ ಧುಮುಕೋಳಿದ್ದೆ ನನ್ನ ಹಿಂದಿನಿಂದ ಯಾರೋ ಎಳೆದಂಗಾಯ್ತು, ಬಹುಶಃ ಇದು ಕಳೆದ ೧ ವರುಶ ದಿಂದ ನೋಡದಿದ್ದ ಹೆತ್ತವರ ಒಡಹುಟ್ಟಿದವರ ಬಗೆಗಿನ ಯೋಛನೆಯೊ ಎನೊ…
ನಾನು ಪದೇಪದೇ ಯೊಚಿಸುತ್ತಿದ್ದೆ..ನಾನು ಮಾಡಿರುವ ತಪ್ಪಾದರೂ ಎನು? ನಾನು ಒಳ್ಳೆಯ ಸೊಸೆ ಆಗಲು ಪ್ರಯತ್ನ ಪಡಲಿಲ್ವೆ? ಇದೆಲ್ಲದರ ಹೊರತಾಗಿ ನನ್ನ ಅಡುಗೆ ಸರಿಇಲ್ಲ, ನನ್ನ ಗುಂಗುರು ಕೂದಲು ನನ್ನ ತೀರ ಸುಂದರವಲ್ಲದ ದೇಹ, ನನ್ನ ಹೆತ್ತವರ ಬಗ್ಗೆ ಹೀಗೆ ಸರಿತಪ್ಪುಗಳ ಪಟ್ಟಿ ಬೆಳೆಯುತ್ತಲಿತ್ತು.
ನನ್ನ ಮದುವೆಯ ೧ ವರುಷದ ಅವಧಿಯಲ್ಲಿ ನಾನು ಪ್ರೀತಿಗಾಗಿ ಹಂಬಲಿಸದ ಕ್ಶಣವಿಲ್ಲ. ಅವನು ಪ್ರೀತಿನ ಕೊಟ್ಟಿಲ್ಲ ಎಂದರೆ ಅದು ತಪ್ಪು ಆದೀತು, ಪರಿಸ್ಥಿತಿಗಳು ಅವನಿಗೆ ಅನುಕೂಲಕರವಾಗಿದ್ದಲ್ಲಿ, ಅವನ ಹೆತ್ತವರು ಖುಶಿಯಾಗಿದ್ದಾಗ, ನನ್ನ ಕೂದಲು ನೇರವಗಿದ್ದಾಗ, ಭಾವನೆಗಳು ಉಕ್ಕುತ್ತಿತ್ತು .ನನ್ನ ಕೈಹಿಡಿದೆಳೆದು ಹೆತ್ತವರ ಮುಂದೆ ಎಂಥ ಹುಡುಗಿ ಸರಿಯಾಗಿ ಬುದ್ದಿ ಕಲ್ಸಿ ಕರ್ಕೊಬನ್ನಿ … ನನ್ನ ವಿಶ್ವಾಸ ಹಾಗು ಆತ್ಮಗೌರವ ಹೊಂಡಕ್ಕೆ ಬಿತ್ತು. ನಾನು ಒಳ್ಳೆಯ ಸೊಸೆಯಾಗಲು ಪಟ್ಟ ಪ್ರಯತ್ನ ಫಲಿಸಲಿಲ್ಲ. ಮನೆಯಿಂದ ಹೊರಬಿದ್ದಾಗ ಹತ್ತು ಜನ ಹಲವು ತರ ಹೇಳಿದ್ರು… ದೇಶ ಬಿಡು, ಮನೆಯೊಳಗೆ ಅವಿತುಕೊ, ಆಗಾಗ ಹೊರಬರಬೇಡ, ಜೀವನ ಅಸಾಧ್ಯಎನಿಸಿತು. ಆದರೆ ಒಂದು ಕ್ಶಣ.. ಸೆಟೆದು ನಿಂತೆ,ಎದುರಿಸಿದೆ. ಬೆರಳಲ್ಲಿ ಭಾರವಾಗಿದ್ದ ರಿಂಗನ್ನು ಅವನಿಗೆ ವಾಪಸ್ಸು ಕೊಟ್ಟೆ. ಮನಸ್ಸು ನಿರಾಳವಾಯ್ತು, ಎಲ್ಲರ ಪ್ರಶ್ನೆಗೂ ಉತ್ತರಿಸಿದೆ.
ನನ್ನ ಈ ೩ ವರುಷ ನಂಗೆ ಅಧ್ಬುತ ಅನುಭವವನ್ನ ನೀಡಿತು. ನನ್ನ ಪುಟ್ಟ ಕನಸಿನ ಗೂಡೊಳಗೆ ಸಂತೋಶದಿಂದಿದ್ದೇನೆ. ಈಗ ನಾನೊಂದು ಪ್ರಖ್ಯಾತ ಮೆಡಿಕಲ್ ಕಂಪನಿಯಲ್ಲಿ ಪ್ರಮುಖ ಹುದ್ದೆಯಲ್ಲಿದೇನೆ. ಕೆಲವೊಂದು ಸಣ್ಣ ಪುಟ್ಟ ಉತ್ಪನ್ನಗಳಿಗೆ ಮಾಡೆಲಿಂಗ್ ಮಾಡುತ್ತಿದ್ದೇನೆ. ನನ್ನ ಆತ್ಮ ಗೌರವ,ಸಾಮರ್ಥ್ಯ ಬೆಳೆದಿದೆ. ಇದಕ್ಕೆ ನನ್ನ ಹೆತ್ತವರಿಗೆ ನಾನು ಚಿರರುಣಿ.
ಮದುವೆ ಜೀವನದಲ್ಲಿ ಮುಖ್ಯ, ಆದರೆ ಎಲ್ಲಿ ಅವಳಿಗೆ ಪ್ರೀತಿ ಸಿಗಲ್ವೊ, ಎಲ್ಲಿ ಅವಳಿಗೆ ಉಸಿರಾಡಲು ಅನುಮತಿ ಬೇಕೋ, ಎಲ್ಲಿ ಅವಳ ಮದುವೆ ಎಂಬ ರಬ್ಬರ್ ಸ್ಟಾಂಪ್ ಅವಳ ನೋವಿನ ಜೀವನಕ್ಕೆ ಸಾಕ್ಶಿ ಯಾಗುವುದೊ ಅಂಥ ಮನೆಯಲ್ಲಿ ಅವಳ ಜೀವನ ಸಾಗಬಾರದು.ಜೀವನದಲ್ಲಿ ಸುಂದರ ಕನಸು ಬೇಕು ಹಾಗು ಅದನ್ನು ಸಾರ್ಥಕ ಪಡಿಸೊ ಛಲ ಇವೆರಡಿದ್ದಲ್ಲಿ ಬದುಕು ಸಾರ್ಥಕ. ಈ ನಿಟ್ಟಿನಲ್ಲಿ ಜಯ ಕಟ್ಟಿಟ್ಟ ಬುತ್ತಿ.
ನನ್ನ ಪುಟ್ಟ ಸಂದೇಶವೇನೆಂದರೆ ಜೀವನದಲ್ಲಿ ಆಶಾವಾದಿಯಾಗಿರಿ. ಪ್ರೀತಿ ನಿಮ್ಮನ್ನ ಅರಸಿ ಕೊಂಡು ಬರುತ್ತೆ.
- ಅನುವಾದ : ಸ್ವರ್ಣ ಭಟ್
POPULAR STORIES :
ಜೂನ್ ತಿಂಗಳಿನಲ್ಲಿ ಅನಾವರಣಗೊಳ್ಳಲಿರುವ ಕರ್ನಾಟಕದ ಅತೀ ದೊಡ್ಡ ಮೃಗಾಲಯ
ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!
ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ ಆ ಹಾಡನ್ನು ಅವರಿಂದ ಮಾತ್ರ ಹಾಡಲು ಸಾಧ್ಯವಾಗಿತ್ತು..!!
`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್