ರಿಯಾಲಿಟಿ ಶೋ ಆಡಿಷನ್ ನಲ್ಲಿ ಹುಡ್ಗೀರಿಗೆ ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?‌ ಇವರ ಮನೆ ಹೆಣ್ಮಕ್ಕಳಿಗೂ ಇದನ್ನೇ ಕೇಳ್ತಾರ…?

Date:

ರಿಯಾಲಿಟಿ ಶೋ ಒಂದರ ಆಡಿಷನ್ ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ‌ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋ ಗೆ ಆಡಿಷನ್ ನಡೆಸುವಾಗ ಸಂಸ್ಕೃತಿ ಮರೆತು ವರ್ತಿಸಿರೋದು ಬಯಲಾಗಿದೆ.


ಆಡಿಷನಲ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ನಿಮಗೆ ಕಿಸ್ ಮಾಡೋಕೆ ಬರುತ್ತಾ…?‌ನಿಮಗೆ ಸೆಕ್ಸ್ ಮಾಡೋಕೆ ಗೊತ್ತಾ…? ನಿಮಗೆ ಎಷ್ಟು ಮಂದಿ ಬಾಯ್ ಫ್ರೆಂಡ್ ಇದ್ದಾರೆ…? ನಮ್ಮ ಮುಂದೆ ಬಟ್ಟೆ ಬದಲಾಯಿಸ್ತೀರ ಅಂತೆಲ್ಲಾ ಆಯೋಜಕರು ಪ್ರಶ್ನೆಗಳನ್ನು ಕೇಳಿದ್ದಾರಂತೆ…!
ಆಡಿಷನ್ ನಲ್ಲಿ ಆಯೋಜರು ಹೀಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ ಮಿತಿ‌ ಮೀರಿ ವರ್ತಿಸಿದಾಗ ವಿದ್ಯಾರ್ಥಿನಿಯರು ತಿರುಗಿ ಬಿದ್ದಿದ್ದಾರೆ…! ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ‌. ನಂತರ ಆಡಿಷನ್ ಸ್ಥಗಿತಗೊಂಡಿದೆ.
ಹುಡುಗಿಯರಿಗೆ ಇಂಥಾ ಪ್ರಶ್ನೆ ಗಳನ್ನು‌ ಕೇಳಿದ ಭೂಪರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.


ಮುಜುಗರ ಉಂಟು ಮಾಡುವ ಪ್ರಶ್ನೆಗಳನ್ನು ಕೇಳಿದ ಆಯೋಜರಿಗೊಂದು ಪ್ರಶ್ನೆ , ನಿಮಗೆ ನಿಮ್ಮ ಮನೆ ಹೆಣ್ಮಕ್ಕಳು ಬೇರೆ, ಕಂಡವರ ಮನೆಯ ಹೆಣ್ಮಕ್ಕಳು ಬೇರೆನಾ…?‌ ಒಂದ್ಸಲ ಇಂಥಾ‌ ಪ್ರಶ್ನೆಗಳನ್ನು ನಿಮ್ಮ ಮನೆಯಲ್ಲಿ ಯಾರಿಗಾದ್ರು ಕೇಳಿ, ಅವರಿಂದ ಅದೆಂಥಾ ಉತ್ತರ ಬರುತ್ತೆ ಅನ್ನೋದನ್ನು ತಿಳಿಸಿ….

Share post:

Subscribe

spot_imgspot_img

Popular

More like this
Related

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ ಕಿಡಿ

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ...

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್!

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ...

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿಎಂ ಸಿದ್ದರಾಮಯ್ಯ

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ...

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ ಬೆಂಗಳೂರು:...