ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ.
ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿದ್ದ ನಟಿ ರೀಟಾ ಅವರ ನಿಧನದ ಸುದ್ದಿಯನ್ನು ನಟ ಶಿಶಿರ್ ಶರ್ಮಾ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡೋ ಮೂಲಕ ತಿಳಿಸಿದ್ದಾರೆ.
“ಬಹಳ ದುಃಖದಿಂದ ನಾನು ಈ ವಿಷಯವನ್ನು ಹೇಳ್ತಿದ್ದೀನಿ. ರೀಟಾ ಬಾದುರಿ ಅವರು ನಮ್ಮೊಂದಿಗೆ ಇಲ್ಲ. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ರೀಟಾ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ಇವರಿಗೆ 62 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ನಡುವೆಯೂ ಶೂಟಿಂಗ್ ನಲ್ಲಿ ತೊಡಗಿಕೊಳ್ಳುತ್ತಿದ್ದ ಇವರು ಸದಾ ಕೆಲಸದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಟ್ಟಿದ್ದರಂತೆ. ಅದರಂತೆ ಇವರ ಅನುಕೂಲಕ್ಕೆ ಅನುಗುಣವಾಗಿ ಚಿತ್ರೀಕರಣ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ‘ನಿಮಕಿ ಮುಖಿಯಾ’ದಲ್ಲಿ ಇಮರತಿ ದೇವಿ ಪಾತ್ರ ನಿರ್ವಹಿಸುತ್ತಿದ್ದರು.
‘ಸಾರಾ ಬಾಯಿ ವಸ್ಸರ್ಸ್ ಸಾರಾ ಬಾಯಿ’ ‘ಅಮಾನತ್’ ‘ಏಕ್ ನಯೀ ಪೆಹಚಾನ್’ ಹಾಗೂ ‘ಬೈಬಲ್ ಕೀ ಕಹಾನೀಯಾ’ ಎಂಬ ಟಿವಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದರು.