ಆಗಸ್ಟ್ ನಲ್ಲಿ ರಿಲಯನ್ಸ್ ಜಿಯೊ 4ಜಿ ಚಾಲನೆ.

Date:

ಬಹು ನಿರೀಕ್ಷಿತ ರಿಲಯಾನ್ಸ್ ಜಿಯೋ ಇನ್ಫೋಕಾಮ್ 4ಜಿ ಸೇವೆ ಮುಂದಿನ ತಿಂಗಳು ಚಾಲನೆಯಾಗಲಿದ್ದು, ಮುಖೇಶ್ ಅಂಬಾನಿಯವರ ಟೆಲಿಕಾಂ ವಲಯದ ಮೊದಲ ಯೋಜನೆ ಎಲ್ಲರ ಕುತೂಹಲಕ್ಕೆ ಸಾಕ್ಷಿಯಾಗಿದೆ.
ಈ ಯೋಜನೆ ಆಗಸ್ಟ್ 15ಕ್ಕೆ ಬಿಡುಗಡೆಯಾಗುವುದರಿಂದ ಕಂಪನಿ ಈ ಯೋಜನೆಗೆ ಫ್ರೀಡಂ ಎಂದು ಹೆಸರಿಡುವ ಸಂಭವವಿದೆ. ರಿಲಯಾನ್ಸ್ ಡೆಟಾ ದರವನ್ನು ಇತರೆ ಕಂಪನಿಗಳಿಗಿಂತ ಶೇ25 ಕಡಿಮೆ ಹಾಗೂ ಉಚಿತ ಕರೆಗಳನ್ನು ಕೊಡುಗೆ ನೀಡಿದೆ. ಆ ಮೂಲಕ ಡಾಟಾ ದರದಲ್ಲಿ ಸ್ಪರ್ಧೆ ಏರ್ಪಡುವ ಸಂಭವವಿದೆ. ರಿಲಯಾನ್ಸ್ ನ ಉಚಿತ ಕೊಡುಗೆ ಮೂಲಕ ಏರ್‍ಟೆಲ್, ವೊಡಾಫೋನ್, ಐಡಿಯಾ ಸೆಲ್ಯೂಲಾರ್ ಕಂಪನಿಗಳ ಆದಾಯಕ್ಕೆ ಭಾರೀ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ಕಂಪನಿಗಳ ಆದಾಯದಲ್ಲಿ ಶೇ.80ರಷ್ಟು ವಾಯ್ಸ್ ಪ್ಲಾನ್‍ಗಳಿಂದ ಬರುತ್ತಿದ್ದು ಗ್ರಾಹಕರು ಉಚಿತ ಮೊಬೈಲ್ ಕರೆಗಳ ಸೌಲಭ್ಯ ಪಡೆಯಬೇಕಾದರೆ ರಿಲಯಾನ್ಸ್ ಜಿಯೊ ಇಂಟರ್‍ನೆಟ್ ಡೇಟಾ ಪ್ಯಾಕ್‍ನ್ನು ಖರೀದಿಸಬೇಕಾಗುತ್ತದೆ. ಡೇಟಾ ದರಗಳನ್ನು ಪ್ರತಿಸ್ಪರ್ಧಿಗಳಿಗಿಂತ ಶೇ.25ರಷ್ಟು ಕಡಿಮೆ ದರದಲ್ಲಿ ನೀಡಿದರೆ ಮತ್ತೆ ದರ ಕಡಿತ ಏರ್ಪಡುತ್ತದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಆಗಸ್ಟ್ 15ಕ್ಕೆ ರಿಲಯಾನ್ಸ್ 4ಜಿಗೆ ಅಧಿಕೃತ ಚಾಲನೆ ದೊರೆಯಲಿದೆ ಅದಕ್ಕಾಗಿ ರಿಲಯಾನ್ಸ್ ಸಂಸ್ಥೆ 1,50,000 ಕೋಟಿ ಹಣ ಹೂಡಲಾಗಿದೆ. ಈ ಸಂಸ್ಥೆ 2010 ರಲ್ಲಿ 4ಜಿ ತರಂಗ ಗುಚ್ಚಗಳ ಹರಾಜಿನಲ್ಲಿ ಪಾಲ್ಗೊಳ್ಳುವ ಮೂಲಕ ಟೆಲಿಕಾಮ್ ವಲಯಕ್ಕೆ ಮರು ಪ್ರವೇಶ ಪಡೆದಿದೆ. ರಿಲಯಾನ್ಸ್ ಜಿಯೋ ಪ್ರವೇಶದಿಂದ ಡೇಟಾ ದರಗಳು ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಭಾರತೀ ಏರ್‍ಟೆಲ್ ಮುಖ್ಯಸ್ಥ ಸುನೀಲ್ ಭಾರತೀ ಮಿತ್ತಲ್ ಸೇರಿದಂತೆ ಹಲವು ಉದ್ಯಮ ಗಣ್ಯರು ವ್ಯಕ್ತಪಡಿಸಿದ್ದಾರೆ.
ಎಚ್‍ಎಸ್‍ಬಿಸಿ ಪ್ರಕಾರ ರಿಲಯಾನ್ಸ್ ಜಿಯೊ ಮುಂದಿನ ನಾಲ್ಕು ವರ್ಷಗಳಲ್ಲಿ ಶೇ.15ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳಲಿದೆ. ಮುಂದಿನ 3 ತಿಂಗಳುಗಳಲ್ಲಿ ಡೇಟಾ ದರದಲ್ಲಿ ಶೇ.15ರಷ್ಟು ಇಳಿಕೆಯಾಗಲಿದ್ದು, ವೇಗದ ಡೇಟಾ ಸೇವೆ ಮತ್ತು ಕಡಿಮೆ ದರಕ್ಕೆ ಕಾರಣವಾಗಲಿದೆ. ನಂತರದಲ್ಲಿ 2017ರ ಮಾರ್ಚ್ ವೇಳೆಗೆ ಶೇ.30ರಷ್ಡು ಕಡಿಮೆಯಾಗುವ ಸಂಭವವಿದೆ. ಆದರೆ ಈ ಕುರಿತು ರಿಲಯಾನ್ಸ್ ಜಿಯೊ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈಗಾಗಲೇ ಜಿಯೋ 4ಜಿಯನ್ನು ರಿಲಾಯನ್ಸ್ ಸಿಬ್ಬಂದಿಗಳು ಹಾಗೂ ಲೈಫ್ ಮೊಬೈಲ್ ಉಪಯೋಗಿಸುವವರು 3 ತಿಂಗಳು ಅನ್ ಲಿಮಿಟಿಡ್ ಕರೆಗಳು ಮತ್ತು ಇಂಟೆರ್ ನೆಟ್ ಸೇವೆಯನ್ನು ಪಡೆಯುತ್ತಿದ್ದು 20 ರಿಂದ 40 ಎಂ.ಬಿ.ಪಿ.ಎಸ್
ಸ್ಪೀಡ್ ಇಂಟೆರ್ ನೆಟ್ ಬರುತ್ತಿದೆ ಎನ್ನಲಾಗಿದೆ. ಆದ್ದರಿಂದ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

4g-jio-speed

POPULAR  STORIES :

ಅವನು ಖಂಡೀಲ್ ಬಲೋಚ್‍ನ ಕೊಲ್ಲಲು ಈ ವಿಡಿಯೋ ಕಾರಣವಂತೆ..!! ಈ ವಿಡಿಯೋದಲ್ಲಿ ಅಂತದ್ದೇನಿದೆ..?

ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…

ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್

ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

Share post:

Subscribe

spot_imgspot_img

Popular

More like this
Related

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...