ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದ ಹಾಗೇ ಅವರ ಹಾವಭಾವ ಬದಲಾಗುತ್ತದೆ. ಹಲವು ಮಕ್ಕಳಂತೂ ಮದ್ವೆಯಾಗಿದ್ದೇ ಹೆತ್ತವರ ಮೇಲೆ ದುಂಡಾವರ್ತನೆ ಶುರುಮಾಡುತ್ತಾರೆ. ಬಹುಶಃ ಶಿವಮೊಗ್ಗದ ತೀರ್ಥಹಳ್ಳಿಯ ಹುಸೈನ್ ಕಾಕಾ ಎಂಬ ದಿವಂಗತ ವಯೋವೃದ್ಧರ ಜೀವನದಲ್ಲಿ ಪಾಪಿ ಮಕ್ಕಳದ್ದೇ ಪಾರುಪತ್ಯವಾಗಿತ್ತು. ಮೀನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಆಮೇಲೆ ಅಡಿಕೆ ವಹಿವಾಟು ನಡೆಸುತ್ತಿದ್ದರು. ಇಡೀ ಊರಿಗೆ ಒಳ್ಳೇ ಹೆಸರು ಸಂಪಾದಿಸಿದ್ದರು. ಅವರು ತಮ್ಮ ಮಕ್ಕಳನ್ನು ದಡ ಸೇರಿಸಿದ್ದರು. ಎಲ್ಲರಿಗೂ ಮದ್ವೆ ಮಾಡಿದ್ದರು. ಖುದ್ದಾಗಿ ಸೊಸೆಯಂದಿರನ್ನು ಸಾಕುತ್ತಿದ್ದರು. ಈ ಮಕ್ಕಳಿಗೆ ಅಂಡಿನಲ್ಲಿ ಶಕ್ತಿ ಬಂದಿದ್ದೇ ಮನೆಬಿಟ್ಟು ಹೊರಟುಹೋದರು. ಇತ್ತ ಹುಸೈನ್ ಕಾಕಾ ಮಡದಿಯನ್ನೂ ಕಳೆದುಕೊಂಡಿದ್ದರು. ಕೊನೆಗಾಲಕ್ಕೆ ನೋಡಿಕೊಳ್ಳಬೇಕಾಗಿದ್ದ ಮಕ್ಕಳಿಗೆ ಭಾರವೆನಿಸಿದರು. ಅದೊಂದು ದಿನ ಕಟ್ಟಿಂಗ್ ಷಾಪ್ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಅವರ ಮಗ ಬಂದ. ಅವರ ಎದುರಿಗೆ ಕ್ಯಾಕರಿಸಿ ಉಗಿದು ಹೊರಟುಹೋಗಿದ್ದ. ಸ್ವಲ್ಪ ಸಮಯದ ಬಳಿಕ `ಯಾಕ್ಹಿಂಗೆ’ ಎಂದು ಕ್ಷೌರದಂಗಡಿ ಮಾಲೀಕ ಕೇಳಿದಾಗ, ಅವನ ಮುಖ ನೋಡಿದ್ರೇ ದಾರಿದ್ರ್ಯಾ ಅಂಟಿಕೊಳ್ಳುತ್ತೆ ಅಂದನಂತೆ. ಈ ಮಾತನ್ನು ಕೇಳಿದ ತಂದೆ, `ಹೋಗ್ಲಿಬಿಡಿ, ಏನೋ ಬುದ್ಧಿಯಿಲ್ಲದೆ ಮಾತನಾಡುತ್ತಾನೆ’ ಎಂದಿದ್ದರಂತೆ. ಇಡೀ ಊರಿಗೆ ಊರೇ ಇಷ್ಟಪಡುತ್ತಿದ್ದ ಹುಸೈನ್ ಕಾಕಾ ಇವತ್ತಿಗೆ ಬದುಕಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ಅವರಿಗಿರುವ ಹೆಸರೇ ಅವರ ಮಕ್ಕಳಿಗೆ ಮಯರ್ಾದೆ ಸಿಗುವಂತೆ ಮಾಡುತ್ತಿದೆ. ಎಲ್ಲಾ ಮಕ್ಕಳನ್ನು ದಡ ಸೇರಿಸಿದ ಈ ಮಹಾನ್ ವ್ಯಕ್ತಿಯನ್ನು ಧರ್ಮಬೇಧವಿಲ್ಲದೆ ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗೆ ತೀರ್ಥಹಳ್ಳಿಯ ಅದೇ ಕ್ಷೌರದಂಗಡಿಯಲ್ಲಿ ಶೇವಿಂಗ್ ಮಾಡಿಸುತ್ತಿದ್ದಾಗ ಕ್ಷೌರದಂಗಡಿಯವನು ಹೇಳಿದ ಕತೆಯಿದು.
- ರಾ ಚಿಂತನ್
POPULAR STORIES :
ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!
ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!