ಎಷ್ಟೇ ದುಡಿದ್ರು ಹಣ ನಮ್ಮತ್ರ ಇರೋದೆ ಇಲ್ಲ. ಅದು ಖರ್ಚಾಗುತ್ತಲೇ ಇರುತ್ತದೆ. ಆದ್ರೆ ಸಿಟಿಯಲ್ಲೊಂದು ಸೈಟು, ಮನೆ ಮಾಡುವುದಂತೂ ಕಷ್ಟವಾಗುತ್ತೆ. ಎಷ್ಟೇ ದುಡಿದ್ರು ನಮ್ ಜನ ಸಾಲ ಸಾಲ ಅನ್ನೋದನ್ನ ಮಾತ್ರ ಬಿಟ್ಟಿಲ್ಲ. ಆದ್ರೆ ಇಲ್ಲೊಬ್ಬ ಭಿಕ್ಷುಕ ಬಿಹಾರದ ಕೋಟ್ಯಧಿಪತಿಯಾಗಿದ್ದಾನೆ ಗೊತ್ತಾ. ಆತ ಹೇಗೆ ಕೋಟ್ಯಾಧಿಪತಿ ಆದ ಎಂಬುದರ ಕುತೂಹಲ ನಿಮ್ಮಲ್ಲಿದೆಯೇ. ಈ ಸ್ಟೋರಿ ಒಮ್ಮೆ ಓದಿ ನೋಡಿ ನಿಮಗೆ ಅರ್ಥವಾಗುತ್ತೆ..!
ಬಿಹಾರ ರಾಜ್ಯದ ಪಟನಾ ಮೂಲದ ಪಪ್ಪು ಕುಮಾರ್ ಎಂಬಾತ. ಆತನದು ಪಟನಾ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಎತ್ತುವ ಕೆಲಸ. ಪ್ರತಿನಿತ್ಯ ಇದೇ ಕೆಲಸವಂತೆ. ಇತರೆ ಭಿಕ್ಷುಕರಿಗಿಂತ ಇತನೇನೂ ಅನಕ್ಷರಸ್ಥನೂ ಅಲ್ಲ ಅಲ್ಪಸ್ವಲ್ಪ ಓದಿಕೊಂಡಿದ್ದಾನೆ. ದಿನ ಭಿಕ್ಷೆ ಎತ್ತಿ ಹಣವನ್ನ ಸಂಪಾದನೆ ಮಾಡುತ್ತಿದ್ದ. ಆದರೆ ಆತ ಇಂದು 1.25 ಕೋಟಿ ರೂ. ಆಸ್ತಿಯ ಒಡೆಯನಾಗಿದ್ದಾನೆ. ಅಷ್ಟೇ ಅಲ್ಲದೆ 2000 ಚದರ ಅಡಿಯ ಜಮೀನನ್ನೂ ಹೊಂದಿದ್ದು. ಸಣ್ಣಪುಟ್ಟ ವ್ಯಾಪಾರಿಗಳಿಗೆ ಬಡ್ಡಿಯ ರೀತಿಯಲ್ಲಿ ಸಾಲವನ್ನೂ ಕೂಡ ನೀಡಿದ್ಧಾನೆ..!
ಅಲ್ಲದೇ ಆತನ ಬಳಿ ನಾಲ್ಕು ಬ್ಯಾಂಕ್ ಖಾತೆಗಳಿವೆ. ಅಷ್ಟು ಹಣ ಕೂಡಿಟ್ಟರು ಭಿಕ್ಷೆ ಬೇಡುವ ಕಾಯಕ ಮಾತ್ರ ಬಿಟ್ಟಿರಲಿಲ್ಲ. ಈ ಭಿಕ್ಷುಕ ಕೋಟ್ಯಾಧಿಪತಿ ಎಂದು ಗೋತ್ತಾಗಿದ್ದು ಹೇಗೆ ಗೋತ್ತಾ..!
ಒಮ್ಮೆ ಪಟನಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸುರಕ್ಷಾ ಪಡೆ ಭಿಕ್ಷುಕರ ನಿರ್ಮೂಲನೆ ಅಭಿಯಾನ ಕೈಗೊಂಡಿತ್ತು. ಈ ವೇಳೆ ಭಿಕ್ಷುಕ ಕುಮಾರ್ ಬಳಿ ಕೊಟ್ಟಿಗಟ್ಟಲೆ ಹಣ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಅಲ್ಲದೆ ಆತ ವ್ಯಾಪಾರಿಗಳಿಗೆ 10 ಲಕ್ಷ ರೂ. ಹಣವನ್ನ ಸಾಲ ನೀಡಿರುವುದು ಮತ್ತು ಆತನ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇರುವುದು ತಿಳಿದು ಬಂದಿದೆ. ಅಧಿಕಾರಿಗಳು ಕುಮಾರ್ ನಿಗೆ ಚಿಕಿತ್ಸೆ ಪಡೆದುಕೊಂಡು ಎಲ್ಲರಂತೆ ಜೀವನ ನಡೆಸುವಂತೆ ಹೇಳಿದರೂ ಆತ ಅದಕ್ಕೆ ಒಪ್ಪಿಲ್ಲ. ಕುಮಾರ್ ತಾನು
ಗುಣಮುಖನಾದರೆ ಭಿಕ್ಷೆ ಬೇಡುವುದು ಹೇಗೆ? ನನಗೆ ಜನರು ಭಿಕ್ಷೆ ನೀಡುತ್ತಾರೆಯೇ ಎಂಬ ಸಂಕೋಚದಲ್ಲಿ ಕಾಲ ಕಳೆಯುತ್ತಿದ್ದಾನೆ ಈ ಕುಮಾರ್.
- ಚಂದ್ರಶೇಖರಾಚಾರ್ ಕನಕೇನಹಳ್ಳಿ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!